ಕೊರೊನಾ ವೈರಸ್ ಕೇವಲ ಸಾಂಕ್ರಮಿಕವಾಗಿರದೇ, ಬಹಳಷ್ಟು ಫ್ಯಾನ್ಸಿ ಥೀಮ್ಗಳಿಗೂ ಸ್ಪೂರ್ತಿಯಾಗಿಬಿಟ್ಟಿದೆ. ಕೊರೊನಾ ಬೋಂಡಾ, ಮಾಸ್ಕ್ ಚಪಾತಿಗಳ ಬಗ್ಗೆ ನೆಟ್ನಲ್ಲಿ ನೋಡಿದ್ದಾಗಿದೆ.
ಇದೀಗ ರಾಜಸ್ಥಾನದ ಜೋಧ್ಪುರದ ರೆಸ್ಟೋರೆಂಟ್ ಒಂದು ಕೊರೊನಾ ವೈರಸ್ ಥೀಮ್ನಲ್ಲಿ ಎರಡು ವಿಶೇಷ ಖಾದ್ಯಗಳನ್ನು ತನ್ನ ಮೆನುವಿನಲ್ಲಿ ಪರಿಚಯಿಸಿದೆ. ಕೋವಿಡ್ ಕರ್ರಿ ಹಾಗೂ ಮಾಸ್ಕ್ ನಾನ್ಗಳ ಹೆಸರಿನಲ್ಲಿ ವಿಶೇಷ ಖಾದ್ಯಗಳನ್ನು ತನ್ನ ಗ್ರಾಹಕರಿಗೆ ಉಣಬಡಿಸುತ್ತಿದೆ ಈ ರೆಸ್ಟೋರೆಂಟ್.
ಮಲಾಯ್ ಕೋಫ್ತಾವನ್ನೇ ಕೊರೊನಾ ವೈರಸ್ ಆಕೃತಿಗೆ ತಂದು, ಅದರಲ್ಲಿ ಕರ್ರಿ ಸಿದ್ಧಪಡಿಸಲಾಗಿದ್ದು, ಸಾದಾ ನಾನ್ ಅನ್ನೇ ಮಾಸ್ಕ್ ಆಕಾರದಲ್ಲಿ ಮಾಡಲಾಗಿದೆ. ಕೊರೊನಾ ಬರದೇ ಇರಲಿ ಎಂದು ಮುಖದ ಮೇಲೆ ಹಾಕಿಕೊಳ್ಳುವ ಮಾಸ್ಕ್ ಆಕಾರದಲ್ಲೇ ಈ ನಾನ್ ಅನ್ನು ಸಿದ್ಧಪಡಿಸಲಾಗಿದೆ.
https://twitter.com/Nationfirst0012/status/1289157005744074752?ref_src=twsrc%5Etfw%7Ctwcamp%5Etweetembed%7Ctwterm%5E1289157005744074752%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fvedic-multi-cuisine-restaurant-jodhpur-covid-curry-and-mask-naan-go-viral-kha-lo-fraaands-say-netizens%2F630374