ಅಮೆರಿಕದ ರೋಢೆ ದ್ವೀಪದಲ್ಲಿ 11 ವರ್ಷದ ಬಾಲಕನಿಗೆ ಬರೋಬ್ಬರಿ 2.5 ಪೌಂಡ್ (1.3 ಕೆಜಿ) ತೂಕದ ಬೃಹತ್ ಮೃದ್ವಂಗಿಯೊಂದು ಸಿಕ್ಕಿದೆ.
ರೋಢೆ ದ್ವೀಪದಲ್ಲಿ ತನ್ನ ಅಜ್ಜನೊಂದಿಗೆ ಹೋಗಿದ್ದ ಕೂಪರ್ ಮೊನ್ಯಾಕೋ ಗೆ ಈ ದೊಡ್ಡ ಮೃದ್ವಂಗಿ ಸಿಕ್ಕಿದೆ. ಕಳೆದ ಸೋಮವಾರ ಈ ಮೃದ್ವಂಗಿ ಸಿಕ್ಕಿದ್ದು, ಸಹಜವಾಗಿ ಸಿಗುವ ಗಾತ್ರಕ್ಕಿಂತ ದೊಡ್ಡ ಗ್ರಾತದಲ್ಲಿ ಇದು ಇದೆ. ಆದ್ದರಿಂದ ಇದರ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆಂದು 11 ವರ್ಷದ ಕೂಪರ್ ಇದನ್ನು ರೋಢೆ ವಿಶ್ವವಿದ್ಯಾಲಯದ ಮರೇನ್ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ನೀಡಿದ್ದಾನೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿವಿ ಆಡಳಿತ ಮಂಡಳಿ, ಸಾಮಾನ್ಯವಾಗಿ 10 ಸೆಂಮಿ ತನಕ ಮೃದ್ವಂಗಿ ಬೆಳೆಯುತ್ತದೆ. ಆದರೆ ಬಾಲಕನಿಗೆ ಸಿಕ್ಕಿರುವ ಇದು 14.75 ಸೆಂ.ಮಿ ಉದ್ದವಿದ್ದು, 1.3 ಕೆಜಿ ತೂಗುತ್ತದೆ ಎಂದು ಹೇಳಿದೆ. ಈ ಬಗ್ಗೆ ಬಾಲಕ ಮಾತನಾಡಿದ್ದು, ಸಮುದ್ರದಲ್ಲಿ ನಿಂತಿರುವ ವೇಳೆ ಈ ಮೃದ್ವಂಗಿ ಸಿಕ್ಕಿತು. ಸಾಮಾನ್ಯಕ್ಕಿಂತ ದೊಡ್ಡದಾಗಿರುವುದರಿಂದ, ಅಚ್ಚರಿಯಿಂದ ಇದನ್ನು ಎತ್ತುಕೊಂಡೆ. ಇದು ಹೆಚ್ಚು ಗಾತ್ರ ಇರುವುದರಿಂದ, ಅದನ್ನು ಸಾಯಿಸಿ ಅಡುಗೆ ಮಾಡದೇ ವಿಶ್ವವಿದ್ಯಾಲಯಕ್ಕೆ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾನೆ.