ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವುದು ಗೊತ್ತೇ ಇದೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಗೆಳತಿ ರಿಯಾ ಚಕ್ರವರ್ತಿ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಮತ್ತೊಂದು ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಹೌದು, ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ರಾತ್ರಿ ತಮ್ಮ ಕಂಪನಿಯ ಸಿಬ್ಬಂದಿಯಾಗಿದ್ದ ಸಿದ್ಧಾರ್ಥ್ ಜೊತೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದರಂತೆ. ವಿವಿಡ್ ರೇಜ್ ರಿಯಾಲಿಟಿ ಎಕ್ಸ್ ಕಂಪನಿಗೆ ಕ್ರಿಯೇಟಿವ್ ಕಂಟೆಂಟ್ ಮ್ಯಾನೇಜರ್ ಆಗಿ ಸಿದ್ಧಾರ್ಥ್ ಪಿಥಾನಿ ನೇಮಕಗೊಂಡಿದ್ದರು. ಸಿದ್ದಾರ್ಥ್ ಅವರನ್ನು ಸುಶಾಂತ್ ರಾತ್ರಿ ಒಂದು ಗಂಟೆಗೆ ಭೇಟಿಯಾಗಿದ್ದರಂತೆ.
ಸುಶಾಂತ್ ನನ್ನನ್ನು ಭೇಟಿಯಾದಾಗ ಸುಮಾರು ಒಂದು ಗಂಟೆಯಾಗಿತ್ತು. ಇಷ್ಟೊತ್ತಾದರೂ ಯಾಕೆ ಮಲಗಿಲ್ಲ ಎಂದು ನನ್ನನ್ನು ಅವರು ಕೇಳಿದರು. ಮುಂದಿನ ಕನಸುಗಳು, ಅಭಿವೃದ್ಧಿ ಬಗ್ಗೆ ತುಂಬಾ ಹೊತ್ತು ನನ್ನ ಬಳಿ ಮಾತನಾಡಿದರು. ಇಬ್ಬರು ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದೆವು. ನಂತರ ಅವರು ಹೋಗಿ ಮಲಗಿದರು. ಆದರೆ ಬೆಳಗ್ಗೆ ಅವರು ಸೂಸೈಡ್ ಮಾಡಿಕೊಂಡಿರುವ ವಿಚಾರ ತಿಳಿದು ನಿಜಕ್ಕೂ ಶಾಕ್ ಆಯ್ತು ಎಂದು ಹೇಳಿದ್ದಾರೆ.