ಪ್ರಕೃತಿಯ ಮಡಿಲಲ್ಲಿ ನಿತ್ಯ ಲಕ್ಷಾಂತರ ಹೋರಾಟ ನಡೆಯುತ್ತಲೇ ಇರುತ್ತದೆ. ತನ್ನ ಅಧಿಪತ್ಯ ಸ್ಥಾಪನೆಗೆ ತನ್ನ ಎದುರಾಳಿಯ ವಿರುದ್ಧ ಹೋರಾಟ ನಡೆಯುತ್ತಲೇ ಇರುತ್ತದೆ. ಇದೇ ರೀತಿಯ ಹೋರಾಟದ ವಿಡಿಯೊ ವೈರಲ್ ಆಗಿದೆ.
ಹೌದು, ಎರಡು ಕೆರೆ ಹಾವುಗಳು ತಮ್ಮ ಗಡಿ ಹಾಗೂ ಸಂಗಾತಿಯನ್ನು ಗೆಲ್ಲುವುದಕ್ಕಾಗಿ ಈ ಹೋರಾಟ ನಡೆಸುತ್ತಿವೆ. ಈ ವಿಡಿಯೊವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಶೇರ್ ಮಾಡಿದ್ದು, ವೈರಲ್ ಆಗಿದೆ.
ನಂದಾ ಅವರ ಪ್ರಕಾರ, ಈ ಎರಡು ಗಂಡು ಕೆರೆ ಹಾವುಗಳು ತಮ್ಮ ಅಧಿಪತ್ಯ ಸಾಧನೆಗೆ ಈ ಹೋರಾಟ ಮಾಡುತ್ತಿವೆ. ಆರಂಭದಲ್ಲಿ ನೀರಿನೊಳಗೆ ಸಂಘರ್ಷ ಮಾಡುತ್ತಿದ್ದ ಈ ಹಾವುಗಳು ಬಳಿಕ, ಏರಿ ಹತ್ತಿ, ಅಲ್ಲಿಂದ ಗಿಡಮರಗಳ ಮೇಲೆ ಹೋಗಿ ಜಗಳವಾಡುತ್ತಿವೆ. ಈ ವಿಡಿಯೊವನ್ನು ಆರು ಸಾವಿರಕ್ಕೂ ಹೆಚ್ಚು ವೀಕ್ಷಿಸಿದ್ದಾರೆ.
https://twitter.com/bikash63/status/1289022866965450752?ref_src=twsrc%5Etfw%7Ctwcamp%5Etweetembed%7Ctwterm%5E1289023146532597760%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fviral-video-of-two-rat-snakes-locked-in-fierce-battle-will-leave-you-biting-your-nails-2746907.html
https://twitter.com/MskSrini/status/1289022508335685632?ref_src=twsrc%5Etfw%7Ctwcamp%5Etweetembed%7Ctwterm%5E1289022508335685632%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fviral-video-of-two-rat-snakes-locked-in-fierce-battle-will-leave-you-biting-your-nails-2746907.html