alex Certify ಮಟಮಟ ಮಧ್ಯಾಹ್ನ ಸಹೋದರಿಯ ಸರಸದ ದೃಶ್ಯ ಕಂಡ ತಮ್ಮ, ಪ್ರಿಯಕರನಿಂದಲೇ ಘೋರಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಟಮಟ ಮಧ್ಯಾಹ್ನ ಸಹೋದರಿಯ ಸರಸದ ದೃಶ್ಯ ಕಂಡ ತಮ್ಮ, ಪ್ರಿಯಕರನಿಂದಲೇ ಘೋರಕೃತ್ಯ

ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಈದ್ಜಗೀರ್ ಗ್ರಾಮದಲ್ಲಿ ಆರು ವರ್ಷದ ಬಾಲಕನನ್ನು ಕೊಲೆ ಮಾಡಲಾಗಿದೆ. ಬಾಲಕನ ಸಹೋದರಿಯ ಪ್ರಿಯಕರನೇ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಮಂಗಳವಾರ ಘಟನೆ ನಡೆದಿದ್ದು ಆರಂಭದಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಬಿಂಬಿಸಲಾಗಿತ್ತು. ಅಪರಾಧ ಭಾವನೆಯಿಂದ ಖಿನ್ನತೆಗೆ ಒಳಗಾದ ಬಾಲಕಿ ಪೋಷಕರಿಗೆ ಸತ್ಯ ಹೇಳಿದ್ದಾಳೆ. ಕೂಲಿ ಕಾರ್ಮಿಕರಾಗಿರುವ ಪೋಷಕರು ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮಂಗಳವಾರ ಮಧ್ಯಾಹ್ನ ಮನೆಗೆ ಎಂಟ್ರಿ ಕೊಟ್ಟಿದ್ದ ಬಾಲಕಿಯ ಪ್ರಿಯಕರ ಆಕೆಯೊಂದಿಗೆ ಸಂಬಂಧ ಬೆಳೆಸಿದ್ದಾನೆ.

ಆರು ವರ್ಷದ ಆಕೆಯ ಸಹೋದರ ಇವರನ್ನು ನೋಡಿದ್ದು ತಮ್ಮ ಸಂಬಂಧವನ್ನು ಬಹಿರಂಗಪಡಿಸುವ ಭಯದಲ್ಲಿ ಪ್ರಿಯಕರ ಬಾಲಕನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪೋಷಕರು ಮನೆಗೆ ಮರಳಿದಾಗ ಛಾವಣಿಯಿಂದ ತಮ್ಮ ಬಿದ್ದು ಗಾಯಗೊಂಡಿರುವುದಾಗಿ ಹುಡುಗಿ ತಿಳಿಸಿದ್ದು ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮಗು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ. ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಈ ಘಟನೆಯ ನಂತರದಲ್ಲಿ ಖಿನ್ನತೆಗೆ ಒಳಗಾದ ಬಾಲಕಿ ಗುರುವಾರ ಸಂಜೆ ಪೋಷಕರ ಬಳಿ ವಿಷಯ ತಿಳಿಸಿದ್ದಾಳೆ. ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದ್ದಾರೆ. ಪರಾರಿಯಾಗಿರುವ ಆಕೆಯ ಪ್ರಿಯಕರನ ಬಂಧನಕ್ಕೆ ಬಲೆ ಬೀಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...