ಆಂಧ್ರಪ್ರದೇಶದಲ್ಲಿ ಸೆಪ್ಟಂಬರ್ 5 ರಿಂದ ಶಾಲೆಗಳ ಪುನಾರಂಭಕ್ಕೆ ಕ್ರಮಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಸೆಪ್ಟಂಬರ್ 5 ರಿಂದ ಶಾಲೆಗಳನ್ನು ತೆರೆಯಲು ಆಂಧ್ರ ಪ್ರದೇಶ ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.
ಸೆಪ್ಟಂಬರ್ 5 ರ ಶಿಕ್ಷಕರ ದಿನಾಚರಣೆಯೊಂದಿಗೆ ಶಾಲೆಗಳು ಪುನರಾರಂಭಗೊಳ್ಳಲಿದೆ. ಅದೇ ದಿನ ವೈ.ಎಸ್.ಆರ್. ವಿದ್ಯಾ ಕನುಕಾ ಯೋಜನೆಗೆ ಚಾಲನೆ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಶಾಲೆ ಆರಂಭದ ದಿನವೇ ಸ್ಕೂಲ್ ಬ್ಯಾಗ್, ಪಠ್ಯ ಪುಸ್ತಕ, ನೋಟ್ಬುಕ್, ಮೂರು ಜೊತೆ ಸಮವಸ್ತ್ರಕ್ಕೆ ಬಟ್ಟೆ, ಒಂದು ಜೊತೆ ಬೂಟು, ಎರಡು ಜೊತೆ ಸಾಕ್ಸ್ ಮತ್ತು ಬೆಲ್ಟ್ ಒಳಗೊಂಡ ಕಿಟ್ ನೀಡಲಾಗುವುದು.
ಕಿಟ್ ನಲ್ಲಿ ಮಾಸ್ಕ್ ಗಳನ್ನು ಕೂಡ ನೀಡಲಿದ್ದು, ಅವುಗಳನ್ನು ಬಳಸುವ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೆಪ್ಟಂಬರ್ 5ರ ವೇಳೆಗೆ ಪರಿಸ್ಥಿತಿ ಸುಧಾರಿಸಬಹುದು. ಶಿಕ್ಷಕರ ದಿನಾಚರಣೆಯೊಂದಿಗೆ ಶಾಲೆಗಳ ಪುನಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದೇ ದಿನ ವೈ.ಎಸ್.ಆರ್. ವಿದ್ಯಾ ಕನುಕಾ ಯೋಜನೆಯಡಿ ಮಕ್ಕಳಿಗೆ ಪಠ್ಯ ಪರಿಕರಗಳನ್ನೊಳಗೊಂಡ ಕಿಟ್ ವಿತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.