alex Certify BIG SHOCKING: ವಿಷಕಾರಿ ಮದ್ಯ ಸೇವಿಸಿ 21 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ವಿಷಕಾರಿ ಮದ್ಯ ಸೇವಿಸಿ 21 ಮಂದಿ ಸಾವು

ಚಂಡಿಗಢ: ಪಂಜಾಬ್ ನಲ್ಲಿ ವಿಷಕಾರಿ ಮದ್ಯ ಸೇವಿಸಿ 21 ಮಂದಿ ಮೃತಪಟ್ಟಿದ್ದಾರೆ. ಪಂಜಾಬ್ ರಾಜ್ಯದ ಅಮೃತಸರ್, ತಾರ್ನ್, ಬತಾಲಾ ಜಿಲ್ಲೆ ಸೇರಿದಂತೆ ಹಲವೆಡೆ ನಕಲಿ ಮದ್ಯ ತಯಾರಾಗುತ್ತಿದ್ದು, ಇದನ್ನು ಸೇವಿಸಿದ 21 ಮಂದಿ ಸಾವನ್ನಪ್ಪಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ವಿಷಕಾರಿ ಮದ್ಯ ಸೇವಿಸಿ ಮೃತಪಟ್ಟ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.

ಅಮೃತಸರದ ತಂಗಾರ ಮುಚ್ಚಲ್ ನಲ್ಲಿ ಜುಲೈ 29ರಂದು ಐದು ಮಂದಿ ಮೃತಪಟ್ಟಿದ್ದು, ನಂತರದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ನಕಲಿ ಮದ್ಯ ಸೇವನೆ ಮಾಡಿ 21 ಮಂದಿ ಮೃತಪಟ್ಟ ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಜಿಪಿ ದಿನಕರ್ ಗುಪ್ತಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...