ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ. ಎಂಸಿಎಕ್ಸ್ ನಲ್ಲಿ ಇಂದು ಚಿನ್ನದ ಬೆಲೆ ಶೇಕಡಾ 0.83 ರಷ್ಟು ಏರಿಕೆಯಾಗಿದ್ದು, 10 ಗ್ರಾಂಗೆ 53,216 ರೂಪಾಯಿಯಾಗಿದೆ. ಬೆಳ್ಳಿ ಬೆಲೆ ಕೂಡ ಶೇಕಡಾ 1.4 ರಷ್ಟು ಅಂದರೆ 865 ರೂಪಾಯಿ ಏರಿಕೆ ಕಂಡು ಪ್ರತಿ ಕೆ.ಜಿ.ಗೆ 63,535 ರೂಪಾಯಿಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಏರಿಕೆಯಿಂದಾಗಿ ಈ ವಾರ ಚಿನ್ನದ ಬೆಲೆ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ. ನಿನ್ನೆ ಬೆಳ್ಳಿ ಶೇಕಡಾ 4 ಅಂದರೆ ಕೆ.ಜಿ.ಗೆ 2,762 ರೂಪಾಯಿ ಇಳಿಕೆ ಕಂಡಿತ್ತು. ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಇಂದು ಸ್ಥಿರವಾಗಿ ಉಳಿದಿವೆ.
ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಳಂಬವಾಗುವ ಸಾಧ್ಯತೆಯನ್ನು ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ. ಅವ್ರ ಹೇಳಿಕೆ ನಂತರ ಯುಎಸ್ ಡಾಲರ್ ಇಳಿಕೆ ಕಂಡಿದೆ. ಡಾಲರ್‌ನಲ್ಲಿನ ದೌರ್ಬಲ್ಯವು ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನವನ್ನು ಅಗ್ಗವಾಗಿಸುತ್ತದೆ. ಆದ್ರೆ ಕೊರೊನಾ ಕಾಲದಲ್ಲಿ ಸುರಕ್ಷಿತ ಹೂಡಿಕೆಗೆ ಜನರು ಮುಂದಾಗಿರುವುದ್ರಿಂದ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬರ್ತಿದೆ.