ನವದೆಹಲಿ: ಚೀನಾ ಆಮದಿಗೆ ಬ್ರೇಕ್ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ ದೇಶಿಯ ಉತ್ಪಾದನೆಗೆ ಒತ್ತು ನೀಡುವ ಉದ್ದೇಶದೊಂದಿಗೆ ಕಲರ್ ಟಿವಿ ಆಮದು ಮೇಲೆ ನಿರ್ಬಂಧ ಹೇರಿದೆ.
ಆಮದು ನೀತಿಯನ್ನು ಬದಲಿಸಲಾಗಿದ್ದು, ಆಮದು ಬದಲಿಗೆ ನಿರ್ಬಂಧಿತ ಆಮದಿಗೆ ಅವಕಾಶ ನೀಡಿದೆ. ವಿದೇಶಿ ವ್ಯಾಪಾರ ಮಹಾನಿರ್ದೇಶಕರು ಈ ಕುರಿತಾಗಿ ಅಧಿಸೂಚನೆ ಹೊರಡಿಸಿದ್ದಾರೆ. ಯಾವುದೇ ಕಂಪನಿಯ ಕಲರ್ ಟಿವಿ ಆಮದು ಮಾಡಿಕೊಳ್ಳಬೇಕಾದರೆ ವಾಣಿಜ್ಯ ಸಚಿವಾಲಯದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.
ಭಾರತಕ್ಕೆ ಚೀನಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಟಿವಿ ಸೆಟ್ ಗಳು ಆಮದಾಗುತ್ತವೆ. ವಿಯೆಟ್ನಾಮ್, ಮಲೇಷ್ಯಾ, ಹಾಂಕಾಂಗ್, ಕೊರಿಯಾ, ಇಂಡೋನೇಷ್ಯಾ, ಥೈಲ್ಯಾಂಡ್ ಜರ್ಮನಿಗಳಿಂದಲೂ ಟಿವಿ ಆಮದಾಗುತ್ತಿದೆ. ಕಲರ್ ಟಿವಿ ಆಮದು ನಿಯಮಾವಳಿ ನಿರ್ಬಂಧಿಸಲಾಗಿದ್ದು ಟಿವಿ ಆಮದಿಗೆ ವಾಣಿಜ್ಯ ಸಚಿವಾಲಯದ ಅನುಮತಿಯನ್ನು ಪಡೆಯಬೇಕಿದೆ.