alex Certify ಜೀವದ ಹಂಗು ತೊರೆದು ಬೆಂಕಿ ನಂದಿಸಿದ ಪೇದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವದ ಹಂಗು ತೊರೆದು ಬೆಂಕಿ ನಂದಿಸಿದ ಪೇದೆ

ತುರ್ತು ಸಮಯದಲ್ಲಿ ಹೆದರಿ ಎಡವಟ್ಟು ಮಾಡಿಕೊಳ್ಳುವುದಕ್ಕಿಂತ ಸಂಯಮದಿಂದ ಯೋಚಿಸಿದರೆ ಉಪಾಯ ಸಿಗುವುದು ಖಚಿತ. ಅದರಲ್ಲೂ ಮನೆಯಲ್ಲಿ ಸಂಭವಿಸುವ ಅಗ್ನಿ ಅವಘಡಗಳನ್ನು ಉಪಾಯದಿಂದ ನಿಭಾಯಿಸದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ.

ಮನೆಯಲ್ಲಿ ಕಾಣಿಸಿಕೊಳ್ಳುವ‌ ಬೆಂಕಿಯನ್ನು ಉಪಾಯವಾಗಿ ನಂದಿಸುವುದು ಹೇಗೆ ಎಂಬ ವಿಡಿಯೊ‌ ಇದೀಗ ವೈರಲ್ ಆಗಿದೆ.

ಉತ್ತರ ಪ್ರದೇಶದ ಮನೆಯೊಂದರ ಸಿಲಿಂಡರ್ ‌ಗೆ ಬೆಂಕಿ ತಗುಲಿದ್ದು, ಇದನ್ನು ನಂದಿಸಲು ಪೊಲೀಸ್ ಅಧಿಕಾರಿಯೊಬ್ಬರು ಉಪಾಯವನ್ನು ಬಳಸಿದ್ದು, ಇದೀಗ ವೈರಲ್ ಆಗಿದೆ‌. ಉತ್ತರ ಪ್ರದೇಶದ ಸಂಬಾಲ್ ಜಿಲ್ಲೆಯ ಅರ್ಚಕರೊಬ್ಬರ ಮನೆಯ ಸಿಲಿಂಡರ್ ಗೆ ಬೆಂಕಿ ತಗುಲಿತ್ತು. ಈ ವೇಳೆ ಯೋಗೇಂದ್ರ ರಾಟಿ ಎನ್ನುವ ಪೇದೆಯೊಬ್ಬರು, ಉದ್ದದ ಕೋಲನ್ನು ಬಳಸಿಕೊಂಡು ಸಿಲಿಂಡರ್‌ನ್ನು ಕೆಳಗೆ ಇಳಿಸಿದ್ದಾರೆ. ಈ ಮೂಲಕ‌ ಸ್ಫೋಟವಾಗುವುದನ್ನು ತಪ್ಪಿಸಿದ್ದಾರೆ. ಬಳಿಕ ದಪ್ಪ ಬಟ್ಟೆಯನ್ನು ನೀರಿನಲ್ಲಿ ನೆನೆಸಿ ಸಿಲಿಂಡರ್ ಮೇಲೆ ಹಾಕಿದ್ದಾರೆ. ಇದರಿಂದ ಬೆಂಕಿ ನಂದಿದೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಸಮಯ ಪ್ರಜ್ಞೆಗೆ ನೆಟ್ಟಿಗರು ಶಹಬಾಸ್‌ಗಿರಿ ನೀಡಿದ್ದಾರೆ.

https://twitter.com/upcoprahul/status/1288421815782531079?ref_src=twsrc%5Etfw%7Ctwcamp%5Etweetembed%7Ctwterm%5E1288421815782531079%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Flpg-cylinder-atop-kitchen-slab-catches-fire-up-cops-quick-reaction-saves-the-day-watch%2F629669

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...