ರಾಯ್ಪುರ್: ಛತ್ತೀಸ್ಗಡದ ಬಲೊಡಾ ಬಜಾರ್ ಜಿಲ್ಲೆಯ ಪಲಾರಿ ಗ್ರಾಮದಲ್ಲಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಸೋದರ ಸಂಬಂಧಿ ಸೇರಿದಂತೆ 8 ಮಂದಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಘಟನೆ ದೃಶ್ಯಗಳನ್ನು ಸೆರೆಹಿಡಿದು ಬಹಿರಂಗಪಡಿಸುವುದಾಗಿ ಬಾಲಕಿಯರನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಇದರಿಂದ ರೋಸಿ ಹೋದ ಬಾಲಕಿ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ವಿಷಯ ಬೆಳಕಿಗೆ ಬಂದಿದೆ.
ಪಲಾರಿ ಗ್ರಾಮದ 14 ಮತ್ತು 16 ವರ್ಷದ ಬಾಲಕಿಯರು ತಮ್ಮ ಬಾಯ್ ಫ್ರೆಂಡ್ ಗಳ ಜೊತೆಗೆ ಮೇ 31 ರಂದು ರಾತ್ರಿ ಬೈಕ್ ನಲ್ಲಿ ತೆರಳಿದ್ದಾರೆ. ಸೋದರ ಸಂಬಂಧಿ ಇವರನ್ನು ಗಮನಿಸಿ ತನ್ನ ಸ್ನೇಹಿತರ ಗುಂಪಿನೊಂದಿಗೆ ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಅವರು ಬರುವುದನ್ನೇ ಕಾದು ಕುಳಿತಿದ್ದಾನೆ.
ಬೈಕ್ ನಲ್ಲಿ ಬಾಯ್ ಫ್ರೆಂಡ್ ಗಳ ಜೊತೆಗೆ ಬಂದ ಬಾಲಕಿಯರನ್ನು ತಡೆದು ಹಲ್ಲೆ ಮಾಡಲಾಗಿದೆ. ಬಾಯ್ ಫ್ರೆಂಡ್ ಗಳನ್ನು ಹೊಡೆದು ಓಡಿಸಲಾಗಿದೆ. ಹುಡುಗಿಯರನ್ನು ಸಮೀಪದ ಪೊದೆಗೆ ಎಳೆದೊಯ್ದ 8 ಮಂದಿ ಅತ್ಯಾಚಾರ ಎಸಗಿದ್ದಾರೆ. ಘಟನೆಯ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.
ಇದಾದ ಬಳಿಕ ಸೋದರ ಸಂಬಂಧಿ ಬಾಲಕಿಯರಿಗೆ ಕರೆ ಮಾಡಿ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡುತ್ತಿದ್ದ. ಇಲ್ಲದಿದ್ದರೆ ವಿಡಿಯೋ ಹರಿಬಿಡುವುದಾಗಿ ಬೆದರಿಸುತ್ತಿದ್ದ. ಇದರಿಂದಾಗಿ ಹೆದರಿದ ಸಹೋದರಿಯರು ಅವರ ಕರೆದಾಗಲೆಲ್ಲ ಹೋಗಿ ಬರುತ್ತಿದ್ದರು. ಜುಲೈ 29 ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸದಿದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾನೆ. ಬಾಲಕಿ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು 8 ಮಂದಿಯನ್ನು ಬಂಧಿಸಿದ್ದಾರೆ.