alex Certify ಜುಲೈ 30 ರಂದು ʼಫ್ರೆಂಡ್‌ ಶಿಪ್ ಡೇʼ ಟ್ರೆಂಡ್‌ ಆಗಿದ್ದೇಕೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜುಲೈ 30 ರಂದು ʼಫ್ರೆಂಡ್‌ ಶಿಪ್ ಡೇʼ ಟ್ರೆಂಡ್‌ ಆಗಿದ್ದೇಕೆ…?

Why is Friendship Day Trending Today when India will Celebrate It ...

ಭಾರತದಲ್ಲಿ ಆಗಸ್ಟ್ 2ರಂದು ಆಚರಿಸಲ್ಪಡುವ ಸ್ನೇಹಿತರ ದಿನಾಚರಣೆಯು ಜುಲೈ 30 ರಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ ಎಂದು ಅನೇಕರಿಗೆ ಅಚ್ಚರಿಯಾಗಿರಬಹುದು. ಆದರೆ ಜುಲೈ 30ರಂದೇ ಅಂತಾರಾಷ್ಟ್ರೀಯ ಸ್ನೇಹಿತರ ದಿನಾಚರಣೆ ಇರುವುದು.

ಜುಲೈ 30, 1958ರಲ್ಲಿ ಮೊದಲ ಬಾರಿಗೆ ಪರಾಗ್ವೆಯಲ್ಲಿ ಮೊದಲ ಬಾರಿಗೆ ಸ್ನೇಹಿತರ ದಿನಾಚರಣೆಯನ್ನು ಆಚರಣೆ ಮಾಡಲಾಗಿತ್ತು. ಇದಾದ ಐದು ದಶಕಗಳ ಬಳಿಕ ವಿಶ್ವ ಸಂಸ್ಥೆಯ ಮಹಾಧಿವೇಶನವು ಏಪ್ರಿಲ್ 27, 2011ರಂದು, ಇದೇ ದಿನವನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನಾಚರಣೆಯನ್ನಾಗಿ ಘೋಷಿಸಿತ್ತು.

ಆ ಬಳಿಕ ಈ ದಿನಾಚರಣೆಯನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಚರಿಸಲಾಗುತ್ತದೆ. ಭಾರತದಲ್ಲಿ ಆಗಸ್ಟ್‌ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಆದ್ದರಿಂದ ಈ ಬಾರಿ ಆಗಸ್ಟ್‌ 2ರಂದು ಭಾರತದಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.

ಈ ದಿನವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿರುವ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್‌, “ಜೊತೆಯಾಗಿ ಬೆಳೆಯೋಣವೆಂದು ಪ್ರಾಮಿಸ್ ಮಾಡೋಣ” ಎಂದು #FriendshipDay ಹಾಗೂ #InternationalFriendshipDay ಟ್ಯಾಗ್‌ಗಳೊಂದಿಗೆ ಪೋಸ್ಟ್ ಮಾಡಿದ್ದಾರೆ.

https://twitter.com/jhampakjhum/status/1288680203116371968?ref_src=twsrc%5Etfw%7Ctwcamp%5Etweetembed%7Ctwterm%5E1288680203116371968%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fwhy-is-friendship-day-trending-today-when-india-will-celebrate-it-on-august-2-2745245.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...