ನೌಕರರ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ್ದ ರಿಯಾಯಿತಿ ಜುಲೈ 31ರಂದು ಮುಗಿಯಲಿದೆ. ಆಗಸ್ಟ್ ಒಂದರಿಂದ ಹಳೆ ನಿಯಮವೇ ಜಾರಿಗೆ ಬರಲಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ, ಇಪಿಎಫ್ ಕೊಡುಗೆಯನ್ನು ಶೇಕಡಾ 4ಕ್ಕೆ ಸೀಮಿತಗೊಳಿಸಿತ್ತು. ಮೇ, ಜೂನ್, ಜುಲೈ ತಿಂಗಳಿಗೆ ಇದು ಅನ್ವಯವಾಗಿತ್ತು.
ಆಗಸ್ಟ್ ನಿಂದ ಮೊದಲ ನಿಯಮ ಜಾರಿಗೆ ಬರಲಿದೆ. ಅಂದ್ರೆ ಇಪಿಎಫ್ ಶೇಕಡಾ 12ರಷ್ಟು ಕಡಿತವಾಗಲಿದೆ. ಮೇ ತಿಂಗಳಿನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮೂರು ತಿಂಗಳು ಇಪಿಎಫ್ ಕಡಿತವನ್ನು ಶೇಕಡಾ 4ಕ್ಕೆ ಸೀಮಿತಗೊಳಿಸುವುದಾಗಿ ಹೇಳಿದ್ದರು. ಇದ್ರಿಂದ 6.5 ಲಕ್ಷ ಕಂಪನಿಗಳ ನೌಕರರಿಗೆ ಪ್ರತಿ ತಿಂಗಳು ಸುಮಾರು 2,250 ಕೋಟಿ ರೂಪಾಯಿ ಲಾಭವಾಗಿತ್ತು.
ನೌಕರರು ಮತ್ತು ಉದ್ಯೋಗದಾತರಿಂದ ಪ್ರತಿ ತಿಂಗಳು ಶೇಕಡಾ 24ರಷ್ಟು ಇಪಿಎಫ್, ಖಾತೆಗೆ ಜಮಾ ಆಗ್ತಿತ್ತು. ಇದ್ರಲ್ಲಿ ನೌಕರರ ಮೂಲ ವೇತನದ ಶೇಕಡಾ 12ರಷ್ಟು ಕೊಡುಗೆ ಇರುತ್ತದೆ. ಮೂಲ ವೇತನ ಹಾಗೂ ಡಿಎಯಲ್ಲಿ ಕಡಿಮೆ ಕಡಿತವಾಗ್ತಿದ್ದ ಸಂದರ್ಭದಲ್ಲಿ ನೌಕರರ ಕೈಗೆ ಹೆಚ್ಚು ಸಂಬಳ ಬಂದಿತ್ತು.