ದಕ್ಷಿಣ ಚೀನಾದ ಜಿಯಾಂಕ್ಸಿ ಪ್ರದೇಶದ ಜಿಮ್ ಒಂದರಲ್ಲಿ ಹೊಕ್ಕುಳಿನ ಬಳ್ಳಿ ಸಮೇತ ನವಜಾತ ಶಿಶುವೊಂದು ಪತ್ತೆಯಾಗಿದೆ. ಹೃದಯ ಹಿಂಡುವ ಘಟನೆ ಇದಾಗಿದೆ.
ಜಿಮ್ ನ ಹಿಂಬದಿಯಲ್ಲಿ ಯಾರೋ ಮಗುವನ್ನ ಬಿಟ್ಟು ಹೋಗಿದ್ದು, ಶುಚಿಗೊಳಿಸುವಾಕೆಗೆ ಹಸುಳೆ ಸಿಕ್ಕಿದೆ. ತಕ್ಷಣವೇ ಕಟ್ಟಡದ ಭದ್ರತಾ ಸಿಬ್ಬಂದಿ ಹಸುಗೂಸನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮಗುವಿನ ಹೊಕ್ಕುಳಬಳ್ಳಿ ನೇತಾಡುತ್ತಲೇ ಇತ್ತು. ಮೈಮೇಲೆಲ್ಲ ಹುಳುಗಳು ಹರಿದಾಡುತ್ತಿದ್ದವು. ದುರ್ವಾಸನೆಯಿಂದ ಕೂಡಿದ್ದ ಕಂದಮ್ಮನನ್ನು ಶುಚಿಗೊಳಿಸಿದ ಶುಶ್ರೂಷಕರು, ಚಿಕಿತ್ಸೆ ನೀಡಿದ್ದು, ಮಗು ಬದುಕುಳಿದಿದೆ. ತಂದೆ-ತಾಯಿ ಸಿಗುವವರೆಗೆ ಅನಾಥಾಶ್ರಮದಲ್ಲಿ ಬಿಡಲು ಪೊಲೀಸರು ನಿರ್ಣಯಿಸಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬೇಕಿದ್ದು, ಆದರೆ ಈ ಸ್ಥಿತಿಯಲ್ಲಿ ಶಿಶುವೊಂದನ್ನ ಕಂಡಿದ್ದು ಇದೇ ಮೊದಲು ಎನ್ನುತ್ತಾರೆ ಶುಶ್ರೂಷಕಿ ಒಯಾಂಗ್ ಟಿಂಗ್.