ಕೊರೋನಾ ಸಾಂಕ್ರಾಮಿಕ ಹರಡುತ್ತಿರುವ ಕಾರಣ ಮಾಸ್ಕ್ ಧರಿಸುವುದನ್ನು ವಿಶ್ವಾದ್ಯಂತ ಕಡ್ಡಾಯಗೊಳಿಸಲಾಗಿದೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವ ವಿಚಾರವಾಗಿ ಕಿತ್ತಾಟ ನಡೆಯುತ್ತಿದೆ.
ಬೆಲ್ಜಿಯಂನ ಬಸ್ ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದ್ದು, ಸರಿಯಾಗಿ ಮಾಸ್ಕ್ ಧರಿಸು ಎಂದು ಹೇಳಿದ ಸಹ ಪ್ರಯಾಣಿಕನ ಮೇಲೆ ಮತ್ತೊಬ್ಬ ಪ್ರಯಾಣಿಕ ದಾಳಿ ಮಾಡಿದ್ದಾನೆ. ಯಾವ ಮಟ್ಟಿಗೆ ಎಂದರೆ ಸಲಹೆ ಕೊಟ್ಟವನ ಎದೆಗೇ ಕಚ್ಚಿಬಿಟ್ಟಿದ್ದಾನೆ.
ಮರ್ಫಿ ಎಂಬಾತ ಬಸ್ಸಿನಲ್ಲಿ ಕೂತಿದ್ದಾಗ ಹಿಂಭಾಗದ ಪ್ರಯಾಣಿಕರು ಸೀನಿದ್ದು ಕೇಳಿಸಿದೆ. ಬಳಿಕ ಆತ ಕ್ಷಮೆ ಕೋರಿದ್ದಾರೆ. ನಂತರ ಜೋಡಿಯೊಂದು ಬಸ್ ಏರಿದ್ದು ಮರ್ಫಿ ಎದುರಿಗೆ ಕುಳಿತರು. ಆದರೆ ಮಾಸ್ಕನ್ನು ಮುಖದಿಂದ ಕೆಳಗಿಳಿಸಿಕೊಂಡಿದ್ದರು. ಆತ ಸರಿ ಧರಿಸುವಂತೆ ಕೋರಿದ್ದಾರೆ. ಆದರೆ ಸಹ ಪ್ರಯಾಣಿಕರು ನಿರಾಕರಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಕೈಕೈ ಮಿಲಾವಣೆ ನಡೆದು, ಸಹಪ್ರಯಾಣಿಕ ಮರ್ಫಿಯ ಎದೆ ಭಾಗಕ್ಕೆ ಕಚ್ಚಿದ್ದಾನೆ. ಉಳಿದ ಪ್ರಯಾಣಿಕರು ಜಗಳ ಬಿಡಿಸಿ ಬೇರ್ಪಡಿಸಿದರು. ಬಳಿಕ ಆ ಕಿರಿಕ್ ದಂಪತಿಗಳು ಬಸ್ ನಿಂದ ಜಿಗಿದು ಪರಾರಿಯಾಗಿದ್ದಾರೆ.