ಆಸ್ಟ್ರೇಲಿಯಾದ ಪಬ್ ಒಂದು ತನ್ನಲ್ಲಿ ಇದ್ದ ಎಮುಗಳು ಅತಿಥಿಗಳ ಊಟವನ್ನು ತಿಂದುಕೊಂಡವು ಎಂಬ ಕಾರಣಕ್ಕೆ ಅವುಗಳನ್ನು ಬ್ಯಾನ್ ಮಾಡಿದೆ.
ಕ್ವೀನ್ಸ್ ಲ್ಯಾಂಡ್ ನ ಯರಾಕಾದಲ್ಲಿರುವ ಔಟ್ ಬ್ಯಾಕ್ ಪಬ್ ಒಂದರ ಬಳಿ 18 ಎಮುಗಳಿದ್ದು, ಇವುಗಳು ಅಲ್ಲಿ ಸಿಗುವ ಆಹಾರವನ್ನು ಲೂಟಿ ಮಾಡುತ್ತಿರುವ ಕಾರಣದಿಂದ ಸ್ಥಳೀಯರಿಗೆ ಅವುಗಳ ಕಾಟ ಸಾಕುಸಾಕಾಗಿಬಿಟ್ಟಿದೆ.
ಆದರೆ ಇವುಗಳ ಕಾಟ ವಿಪರೀತ ಎನ್ನುವ ಮಟ್ಟಕ್ಕೆ ಏರಿದ್ದು ಯಾವಾಗೆಂದರೆ, ಕರೋಲ್ ಹಾಗೂ ಕೆವಿನ್ ಎಂಬ ಪುಂಡ ಎಮುಗಳು ಈ ಯಾರಕಾ ಹೊಟೇಲ್‌ನ ಮುಂಬದಿಯ ಮೆಟ್ಟಿಲುಗಳನ್ನು ಏರಬಹುದು ಎಂದು ಅರಿತಕೊಂಡಕೊಂಡಾಗ.
ಫ್ರೈಡ್ ಎಗ್, ಬಾರ್ಬೆಕ್ಯೂ ಪ್ಲೇಟ್, ಪ್ಯಾನ್ ಮೇಲೆ ಇರುವ ಟೋಸ್ಟ್ ಸೇರಿದಂತೆ ಸಿಕ್ಕಿದ್ದೆಲ್ಲವನ್ನೂ ದೋಚುವ ಈ ಎಮುಗಳ ಕಾಟದಿಂದ ಹೈರಾಣಾಗಿದ್ದೇವೆ ಎಂದು ಅಲ್ಲಿನ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.