ನವದೆಹಲಿ: ಬಿಜೆಪಿ ನಿಷೇಧಿತ ಚೀನಾ ಆಪ್ ಬಳಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಎಎಪಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಸಹಿ ಇರುವ ಪತ್ರವನ್ನು ಅಪ್ಲೋಡ್ ಮಾಡಲಾಗಿದ್ದು, ನಿಷೇಧಿತ ಚೀನಾ ಾಪ್ ಕ್ಯಾಮ್ ಸ್ಕ್ಯಾನರ್ ನಲ್ಲಿ ಪತ್ರವನ್ನು ಸ್ಕ್ಯಾನ್ ಮಾಡಲಾಗಿದೆ ಎಂದು ಕೆಂಪು ಗುರುತು ಹಾಕಿ ತೋರಿಸಲಾಗಿದೆ.
ಜೂನ್ ನಲ್ಲಿ ಚೀನಾ-ಭಾರತದ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬಳಿಕ ಕೇಂದ್ರ ಸರ್ಕಾರ ಪ್ರಸಿದ್ಧ ಟಿಕ್ ಟಾಕ್, ಹೆಲೋ, ಕ್ಯಾಮ್ ಸ್ಕ್ಯಾನರ್ ಸೇರಿ 59 ಚೀನೀ ಆ್ಯಪ್‌ಗಳನ್ನು ಜೂನ್ ತಿಂಗಳಲ್ಲಿ ನಿಷೇಧ ಮಾಡಿತ್ತು. ದೇಶದ ಸುರಕ್ಷತೆಗೆ ಧಕ್ಕೆಯಾಗಬಲ್ಲ ಇನ್ನೂ 275 ಆಪ್ ಗಳನ್ನು ನಿಷೇಧಿಸಲು ಶಿಫಾರಸು ಮಾಡಲಾಗಿದೆ.
“ಅದು ಫೋಟೋಶಾಪ್ ನಲ್ಲಿ ಸೃಷ್ಟಿ ಮಾಡಿದ ಫೋಟೋಗಳಾಗಿವೆ. ಆಮ್ ಆದ್ಮಿ ಪಾರ್ಟಿ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ” ಎಂದು ದೆಹಲಿ ಬಿಜೆಪಿ ಟ್ವಿಟರ್ ನಲ್ಲೇ ಪ್ರತಿಕ್ರಿಯೆ ನೀಡಿದೆ.