ಇಡೀ ಹಾಸನದಲ್ಲಿಯೇ ಕಡಿಮೆ ದರಕ್ಕೆ ಔಷಧ ನೀಡುವ ಮೂಲಕ ಅಲ್ಲಿನ ಜನತೆ ಪ್ರೀತಿ ಗಳಿಸುವುದರ ಜೊತೆಗೆ ಬಡವರ ಪಾಲಿಗೆ ದೇವರಾಗಿದ್ದ ಡಾ.ರತ್ನಾಕರ ಶೆಟ್ಟಿ ಕೊರೊನಾಗೆ ಬಲಿಯಾಗಿದ್ದಾರೆ. ನಿನ್ನೆ ರಾತ್ರಿ 10.30ರಲ್ಲಿ ವೈದ್ಯ ರತ್ನಾಕರ ಶೆಟ್ಟಿ ಕೊನೆಯುಸಿರೆಳೆದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಇದ್ದ ಕಾರಣ ಇವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಪಾಸಿಟಿವ್ ಇರುವುದು ಗೊತ್ತಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನ ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಕೊನೆಯುಸಿರೆಳೆದಿದ್ದಾರೆ.
ಕಳೆದ ಒಂದೆರಡು ತಿಂಗಳ ಹಿಂದೆ ಇವರು ಕೊರೊನಾಗೆ ಬಲಿಯಾಗಿದ್ದಾರೆಂದು ಸುಳ್ಳು ಸುದ್ದಿ ಹರಿದಾಡಿತ್ತು. ಇದಕ್ಕೆ ಖುದ್ದು ವೈದ್ಯರೇ ಸ್ಪಷ್ಟನೆ ನೀಡಿ ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದರು. ಆದರೆ ಇದೀಗ ಕೊರೊನಾ ಇವರನ್ನು ಬಲಿ ಪಡೆದಿದೆ.