ಕೊರೊನಾ ಸಾಂಕ್ರಾಮಿಕ ರೋಗ ಮತ್ತು ಭೌಗೋಳಿಕ-ರಾಜಕೀಯ ಉದ್ವಿಗ್ನತೆಯ ನಡುವೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತೀವ್ರ ಏರಿಕೆಯಾಗ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ ಬೆಳ್ಳಿಯ ಬೆಲೆ ದ್ವಿಗುಣಗೊಂಡಿದೆ. ಬೆಳ್ಳಿಯಲ್ಲಿ ಹೂಡಿಕೆ ಮಾಡಿದ್ದ ಹೂಡಿಕೆದಾರರು ಭರ್ಜರಿ ಲಾಭ ಗಳಿಸುತ್ತಿದ್ದಾರೆ.
ಮಾರ್ಚ್ 18, 2020 ರಂದು, ಎಂಸಿಎಕ್ಸ್ ನಲ್ಲಿ ಕೆ.ಜಿ ಬೆಳ್ಳಿ ಬೆಲೆ 33,580 ರೂಪಾಯಿಯಾಗಿದ್ದು, ಇಂದು ಕೆ.ಜಿ. ಬೆಳ್ಳಿ ಬೆಲೆ 67,560 ಕ್ಕೆ ಏರಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಜನರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡ್ತಿದ್ದಾರೆ.
ಚೀನಾ-ಯುಎಸ್ ಉದ್ವಿಗ್ನತೆಯ ನಂತರವೂ ಜನರು ಸುರಕ್ಷಿತ ಹೂಡಿಕೆಗೆ ಒಲವು ತೋರುತ್ತಿದ್ದಾರೆ.ಬೆಳ್ಳಿ ಬೆಲೆ ಏರಿಕೆಯಾಗಲು ಇದು ಕಾರಣವಾಗಿದೆ. ಮುಂಬರುವ ಕಾಲದಲ್ಲಿ ಬೆಳ್ಳಿಯ ಬೆಲೆ ಮತ್ತಷ್ಟು ಏರಿಕೆಯಾಗಲಿದೆ.