ನಾಸಾ: ಸೂರ್ಯನ ಸಮೀಪ ಕಾಣಿಸಿಕೊಂಡ ಅಪರೂಪದ ಹಾರುವ ತಟ್ಟೆ(ಯುಎಫ್ಒ) ರೀತಿಯಲ್ಲಿರುವ ಆಕಾರದ ಫೋಟೋವನ್ನು ನಾಸಾ ವಿಜ್ಞಾನಿಗಳು ಬಿಡುಗಡೆ ಮಾಡಿದ್ದಾರೆ.
ಸೂರ್ಯನ ಅಧ್ಯಯನ ನಡೆಸುವ ಸಲುವಾಗಿ ನಾಸಾ 1995 ರಲ್ಲಿ ಹಾರಿ ಬಿಟ್ಟ ಸೋಲಾರ್ ಆ್ಯಂಡ್ ಹೆಲಿಸ್ಪೆರಿ ಆಬ್ಸರ್ವೇಟರಿ (SOHO) ಸ್ಯಾಟ್ ಲೈಟ್ ಫೋಟೋವೊಂದನ್ನು ಕಳಿಸಿದೆ.
ಚೌಕಾಕಾರದ ಯಾವುದೇ ಪ್ರತಿಫಲನ ಇಲ್ಲದ ಮಸುಬು ಬಣ್ಣದ ವಸ್ತು ಇದಾಗಿದೆ. ಭೂಮಿಗಿಂತ ಸುಮಾರು ಹತ್ತು ಪಟ್ಟು ದೊಡ್ಡದಿದೆ ಎಂದು ವಿಜ್ಞಾನಿ ಸ್ಕಾಟ್ ಬೇರಿಂಗ್ ತಮ್ಮ ವೆಬ್ ಸೈಟ್ ನಲ್ಲಿ ಬರೆದುಕೊಂಡಿದ್ದಾರೆ.
ವಸ್ತುವಿನ ಸುತ್ತ ಕೆಂಪಾದ ಕವಚವೊಂದು ಕಾಣಿಸುತ್ತಿದೆ ಎಂದು ತಜ್ಞರು ಹೇಳಿಕೊಂಡಿದ್ದಾರೆ. ಅದು ಸೂರ್ಯನ ಒಂದು ಭಾಗ ಆಗಿರಲಿಕ್ಕೂ ಸಾಕು ಎಂದು ಅಮೆರಿಕಾ ಅಂತರಿಕ್ಷ ಏಜೆನ್ಸಿಯ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.