alex Certify 20 ಸೆಂ.ಮೀ. ಉದ್ದದ ಚಾಕು ನುಂಗಿದ ಭೂಪ, ಆಮೇಲೆ ಆಗಿದ್ದೇನು..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ಸೆಂ.ಮೀ. ಉದ್ದದ ಚಾಕು ನುಂಗಿದ ಭೂಪ, ಆಮೇಲೆ ಆಗಿದ್ದೇನು..?

ಅಚಾನಕ್ ಆಗಿ ಸೂಜಿ, ಪಿನ್ ನುಂಗಿರುವುದನ್ನು ನೋಡಿದ್ದೇವೆ. ಅಥವಾ ಮೊಳೆ ಸೇರಿದಂತೆ ಮೆಟಲ್ ವಸ್ತುಗಳನ್ನು ತಿಂದು ಬದುಕಿರುವ ವ್ಯಕ್ತಿಗಳನ್ನೂ ನೋಡಿದ್ದೇವೆ. ಆದರೆ 20 ಸೆಂ.ಮೀ. ಉದ್ದದ ಚಾಕು ನುಂಗಿರುವ ವ್ಯಕ್ತಿಯನ್ನ ಎಲ್ಲಾದರೂ ನೋಡಿದ್ದೀರಾ..?

ಹೌದು, ತಿನ್ನಬೇಕು ಎಂದೆನಿಸಿತು ಎಂಬ ಕಾರಣಕ್ಕೆ 20 ಸೆಂ.ಮೀ. ಉದ್ದದ ಚಾಕುವನ್ನು ನುಂಗಿರುವ ಘಟನೆ ಹರಿಯಾಣದ ಪಲ್ವಾನ್‌ನಲ್ಲಿ ನಡೆದಿದೆ. 28 ವರ್ಷದ ಭೂಪನೊಬ್ಬ ಕಳೆದ ಒಂದೂವರೆ ತಿಂಗಳ ಹಿಂದೆ ಉದ್ದದ ಚಾಕು ನುಂಗಿದ್ದಾನೆ. ಅದೃಷ್ಟ ಎಂಬಂತೆ ಈ ವ್ಯಕ್ತಿ ಚಾಕು ನುಂಗಿದಾಗ ಶ್ವಾಸನಾಳ, ಶ್ವಾಸಕೋಶ, ಹೃದಯ ಯಾವುದಕ್ಕೂ ಡ್ಯಾಮೇಜ್ ಆಗಿಲ್ಲ. ಈ ಚಾಕು ನೇರವಾಗಿ ಯಕೃತ್ ನಲ್ಲಿ ಸೇರಿಕೊಂಡಿದೆ.

ಒಂದೂವರೆ ತಿಂಗಳ ನಂತರ ಈತನಿಗೆ ಹೊಟ್ಟೆ ಭಾಗದಲ್ಲಿ ನೋವು ಕಾಣಿಸಿದೆ. ವೈದ್ಯರನ್ನು ಸಂಪರ್ಕ ಮಾಡಿದ್ದಾನೆ ಈ ವ್ಯಕ್ತಿ. ಆಗ ಎಕ್ಸರೇ ತೆಗೆಸಿದಾಗ ಅಚ್ಚರಿ ಎಂಬಂತೆ 20 ಸೆಂ.ಮೀ.ಉದ್ದದ ಚಾಕು ಇರುವುದು ಪತ್ತೆಯಾಗಿದೆ. ನಂತರ ಏಮ್ಸ್ ವೈದ್ಯರ ತಂಡ ಮೂರು ಗಂಟೆಗಳ ಕಾಲ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಈ ಚಾಕುವನ್ನು ಹೊರ ತೆಗೆದಿದ್ದಾರೆ. ಸದ್ಯ ಈ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...