ಹಿರಿಯ ನಾಗರಿಕರಿಗಾಗಿ ವಿಶೇಷ ಸ್ಥಿರ ಠೇವಣಿ(ಎಫ್.ಡಿ.)ದರಗಳನ್ನು ಪರಿಷ್ಕರಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಖಾಸಗಿಯ ಐಸಿಐಸಿಐ ಬ್ಯಾಂಕ್ ಮತ್ತು ಹೆಚ್.ಡಿ.ಎಫ್.ಸಿ. ಬ್ಯಾಂಕ್ ಗಳಲ್ಲಿ ಹಿರಿಯ ನಾಗರಿಕರಿಗೆ ವಿಶೇಷ ಯೋಜನೆಯಡಿ ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ.
ನಿಶ್ಚಿತ ಅವಧಿಯ ಠೇವಣಿಗಳಿಗೆ ಅನ್ವಯವಾಗುವಂತೆ ಅಸ್ತಿತ್ವದಲ್ಲಿರುವ ದರಗಳಿಗಿಂತ ಹೆಚ್ಚಿನ ಬಡ್ಡಿದರ ನೀಡಲಾಗುವುದು. 2020 ರ ಸೆಪ್ಟೆಂಬರ್ 30ರ ವರೆಗೆ ಎಫ್.ಡಿ. ಯೋಜನೆ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.
ಹಿರಿಯ ನಾಗರಿಕರ ವಿಶೇಷ ಎಫ್.ಡಿ. ಯೋಜನೆ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಅನ್ವಯಿಸುತ್ತದೆ. ಆಯಾ ಬ್ಯಾಂಕ್ ಗಳಿಗೆ ಅನುಗುಣವಾಗಿ ನಿಶ್ಚಿತ ಠೇವಣಿ ಮೊತ್ತದ ಬಡ್ಡಿದರ ಬದಲಾಗುತ್ತದೆ ಎನ್ನಲಾಗಿದೆ.
ಹಿರಿಯ ನಾಗರಿಕರಿಗಾಗಿ ಎಸ್ಬಿಐ ವಿಶೇಷ ಎಫ್ಡಿ ಯೋಜನೆಯನ್ನು ‘ಎಸ್ಬಿಐ ವಿ ಕೇರ್’ ಎಂದು ಕರೆಯಲಾಗುತ್ತದೆ. ಹಿರಿಯ ನಾಗರಿಕರು ವಿಶೇಷ ಎಫ್ಡಿ ಯೋಜನೆಯಡಿ ಸ್ಥಿರ ಠೇವಣಿ ಇಟ್ಟರೆ, ಎಫ್ಡಿಗೆ ಅನ್ವಯವಾಗುವ ಬಡ್ಡಿದರ 6.20% ಆಗಿರುತ್ತದೆ. ಈ ದರಗಳು ಮೇ 27 ರಿಂದ ಅನ್ವಯವಾಗುತ್ತವೆ.
ಬ್ಯಾಂಕ್ ಆಫ್ ಬರೋಡಾ ವಿಶೇಷ ಎಫ್ಡಿ ಯೋಜನೆಯಡಿ ಹಿರಿಯ ನಾಗರಿಕರು ಸ್ಥಿರ ಠೇವಣಿ ಇಟ್ಟರೆ, ಎಫ್ಡಿಗೆ ಅನ್ವಯವಾಗುವ ಬಡ್ಡಿದರ 6.30% ಆಗಿರುತ್ತದೆ. 7 ದಿನಗಳಿಂದ 10 ವರ್ಷಗಳಲ್ಲಿ ಠೇವಣಿಗಳ ಮೇಲೆ, ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗೆ 3.40% ರಿಂದ 6.30% ಪಾವತಿಸುತ್ತದೆ.
ಹೆಚ್ಡಿಎಫ್ಸಿ ಬ್ಯಾಂಕ್ ವಿಶೇಷ ಎಫ್ಡಿ ಯೋಜನೆಯನ್ನು ಹೆಚ್ಡಿಎಫ್ಸಿ ಹಿರಿಯ ನಾಗರಿಕ ಆರೈಕೆ ಎಂದು ಕರೆಯಲಾಗುತ್ತದೆ. ಎಫ್ಡಿಗೆ ಅನ್ವಯವಾಗುವ ಬಡ್ಡಿದರ 6.25% ಆಗಿರುತ್ತದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿ 25 ಬಿಪಿಎಸ್ ಪ್ರೀಮಿಯಂ ಪಾವತಿಸಲಾಗುವುದು. ಈ ದರಗಳು ಜೂನ್ 12 ರಿಂದ ಅನ್ವಯವಾಗುತ್ತವೆ.
ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್ಡಿ ಯೋಜನೆಯು ಹಿರಿಯ ನಾಗರಿಕರಿಗೆ ವಾರ್ಷಿಕ 6.30% ಬಡ್ಡಿದರವನ್ನು ನೀಡುತ್ತದೆ ಎಂದು ಹೇಳಲಾಗಿದೆ.