alex Certify ಮುಗಿಲು ಮುಟ್ಟುತ್ತಿರುವ ‘ಚಿನ್ನ’ದ ಬೆಲೆಗೆ ಖರೀದಿದಾರರು ಕಂಗಾಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಗಿಲು ಮುಟ್ಟುತ್ತಿರುವ ‘ಚಿನ್ನ’ದ ಬೆಲೆಗೆ ಖರೀದಿದಾರರು ಕಂಗಾಲು…!

ಚಿನ್ನದ ಬೆಲೆ ಏರಿಕೆಯ ನಾಗಾಲೋಟ ಮುಂದುವರೆದಿದೆ. ಆಷಾಡ ಮುಗಿದ ಬಳಿಕ ಶ್ರಾವಣದಿಂದ ಶುಭ ಸಮಾರಂಭಗಳು ಆರಂಭವಾಗುತ್ತಿರುವ ಸಂದರ್ಭದಲ್ಲೇ ಚಿನ್ನದ ಬೆಲೆ ಮುಗಿಲೆತ್ತರಕ್ಕೆ ಏರಿರುವುದು ಖರೀದಿದಾರರನ್ನು ಕಂಗಾಲಾಗಿಸಿದೆ.

ಸೋಮವಾರದಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 905 ರೂಪಾಯಿ ಏರಿಕೆಯಾಗುವುದರ ಮೂಲಕ 52,960 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಕೆಜಿಗೆ 3,347 ರೂಪಾಯಿ ಏರಿಕೆಯಾಗುವುದರ ಮೂಲಕ 65,670 ರೂಪಾಯಿ ತಲುಪಿದೆ.

ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ – ಬೆಳ್ಳಿ ಬೆಲೆ ಏರಿಕೆಯಾಗಿರುವುದು, ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡಲು ಉತ್ಸಾಹ ತೋರುತ್ತಿರುವುದರಿಂದ ಇವುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...