ಚೈನೀಸ್ ಅಪ್ಲಿಕೇಷನ್ ಬ್ಯಾನ್ ಪ್ರಕ್ರಿಯೆ ಮುಂದುವರೆದಿದೆ. ಈ ಹಿಂದೆ ನಿಷೇಧಿಸಲಾದ 59 ಚೈನೀಸ್ ಆ ಪ್ ಗಳ ಜೊತೆಗೆ 47 ಚೈನೀಸ್ ಆ ಪ್‌ಗಳನ್ನು ಸರ್ಕಾರ ನಿಷೇಧಿಸಿದೆ. ಟೆಲಿಕಾಂ ಸಚಿವಾಲಯದ ಭದ್ರತಾ ಪರಿಶೀಲನೆಯ ನಂತರ 47 ಚೀನೀ ಆಪ್ ಗಳನ್ನು ನಿಷೇಧ ಮಾಡಿದೆ.
ರಾಷ್ಟ್ರೀಯ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆಯ ಉಲ್ಲಂಘನೆಗಾಗಿ ಒಟ್ಟು 275 ಅಪ್ಲಿಕೇಶನ್‌ಗಳು ಸರ್ಕಾರಿ ರಾಡಾರ್‌ನಲ್ಲಿವೆ. ಶೀಘ್ರದಲ್ಲೇ ಸರ್ಕಾರವು ನಿಷೇಧಿಸಬಹುದಾದ 275 ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಪಬ್‌ಜಿ ಸೇರಿದಂತೆ ಪ್ರಮುಖ ಆಪ್ ಗಳು ಸೇರಿವೆ.
ಈಗ 47 ಅಪ್ಲಿಕೇಷನ್ ಬ್ಯಾನ್ ಆಗಿದೆ. ಅದು ಯಾವವು ಎಂಬ ಪಟ್ಟಿಯನ್ನು ಸರ್ಕಾರ ಶೀರ್ಘವೇ ಬಿಡುಗಡೆ ಮಾಡಲಿದೆ. ಈಗ ನಿಷೇಧಿತ 47 ಚೀನೀ ಅಪ್ಲಿಕೇಶನ್‌ಗಳು ಈ ಹಿಂದೆ ನಿಷೇಧಿಸಲ್ಪಟ್ಟ ಅಪ್ಲಿಕೇಶನ್‌ಗಳ ತದ್ರೂಪುಗಳಾಗಿ ಕಾರ್ಯನಿರ್ವಹಿಸುತ್ತಿದ್ದವು.