ಕೆಲವೊಮ್ಮೆ ಯಾರ ಜೀವ ಯಾರು ಉಳಿಸುತ್ತಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ.
ಹೌದು, ನ್ಯೂಸ್ ಚಾನೆಲ್ ಒಂದರ ವರದಿಗಾರ್ತಿಗೆ ಕ್ಯಾನ್ಸರ್ ಇರುವ ಬಗ್ಗೆ ಆಕೆಗೆ ತಿಳಿಯದೇ, ಆಕೆಯ ಗಂಟಲಿನಲ್ಲಿ ಉಬ್ಬಿರುವುದನ್ನು ಕಂಡು ವೀಕ್ಷಕರೊಬ್ಬರು ಇಮೇಲ್ ಮೂಲಕ ಪತ್ರಕರ್ತೆಯ ಗಮನಕ್ಕೆ ತಂದಿದ್ದಾರೆ.
ಈ ಬಗ್ಗೆ ಸ್ವತಃ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಕ್ಟೋರಿಯಾ ಪ್ರಿನ್ಸ್ ಟ್ವೀಟ್ ಮಾಡಿದ್ದಾರೆ. ಟಿವಿಯಲ್ಲಿ ನ್ಯೂಸ್ ಓದುತ್ತಿರುವಾಗ ಗಂಟಲಿನಲ್ಲಿ ಕಾಣಿಸಿಕೊಂಡ ಉಬ್ಬನ್ನು ಕಂಡು ಫೋಟೋ ತಗೆದು ಇಮೇಲ್ ಕಳುಹಿಸಿದರು. ಇದನ್ನು ಪರೀಕ್ಷಿಸಿದಾಗ, ಕ್ಯಾನ್ಸರ್ ಇರುವುದು ಖಚಿತವಾಗಿದೆ. ಇದನ್ನು ನನ್ನ ಗಮನಕ್ಕೆ ತಂದ ನಿಮಗೆ ಧನ್ಯವಾದ ಎಂದಿದ್ದಾರೆ.
ಇನ್ನು ಕೊರೋನಾ ಇರುವುದರಿಂದ ಕಿಮೋಥೆರಪಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮುಂದಿನ ದಿನದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕವೇ ಚಿಕಿತ್ಸೆ ನೀಡಬೇಕು ಎನ್ನುವ ಮಾತುಗಳು ಕೇಳಿಬಂದಿವೆ.