ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಎಸ್‌ಬಿಐ ಇದೀಗ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಅರ್ಹ ಹಾಗು ಆಸಕ್ತರು ಈ ಬ್ಯಾಂಕ್‌ನಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಸರ್ಕಲ್ ಆಫೀಸರ್ ಹುದ್ದೆಗೆ ಆಹ್ವಾನ ನೀಡಿದೆ. ಹಾಗಾದ್ರೆ ಇಲ್ಲಿ ಅರ್ಜಿ ಸಲ್ಲಿಸುವುದು ಹೇಗೆ..? ವಿದ್ಯಾರ್ಹತೆ ಏನು ಅಂತೀರಾ ಮುಂದೆ ನೋಡಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3850 ಸರ್ಕಲ್ ಆಫೀಸರ್ ಹುದ್ದೆಗೆ ಆಹ್ವಾನ ನೀಡಿದೆ. ಇಂದಿನಿಂದ ಅರ್ಜಿ ಸಲ್ಲಿಸಬಹುದು ಹಾಗೂ ಆಗಸ್ಟ್ 16ರ ಒಳಗೆ ಅರ್ಜಿ ಸಲ್ಲಿಸಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರೂ ಒಂದು ಪದವಿ ಹೊಂದಿರಬೇಕು. ಹಾಗೂ ಆಗಸ್ಟ್ 1, 2020ಕ್ಕೆ ಅನ್ವಯವಾಗುವಂತೆ 30 ವರ್ಷ ವಯಸ್ಸು ದಾಟಿರಬಾರದು.
ಇನ್ನು ಜನರಲ್, ಒಬಿಸಿ, EWS ಕೆಟಗರಿಯವರು 750 ರೂಪಾಯಿ ಶುಲ್ಕ ನೀಡಬೇಕು. ಹಾಗೂ ಎಸ್‌ಸಿ, ಎಸ್‌ಟಿ ಕೆಟಗರಿಯವರಿಗೆ ಯಾವುದೇ ಶುಲ್ಕ ಇರುವುದಿಲ್ಲ. sbi.co.in ವೆಬ್‌ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಕೆ ಮಾಡಬಹುದು. ಬ್ಯಾಂಕ್‌ಗೆ ತೆರಳಿ ಅರ್ಜಿ ಹಾಕಲು ಸಾಧ್ಯವಿಲ್ಲ.