ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಕೊರೊನಾ ಜಾಗೃತಿಗಾಗಿ ಕೇಂದ್ರ ಸರಕಾರ, ಕಾಲರ್ ಟ್ಯೂನ್ ಸಿದ್ಧಪಡಿಸಿದೆ. ಇದರಲ್ಲಿರುವ ಧ್ವನಿ ಯಾರದ್ದು ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ.
ಹಿಂದಿ ಭಾಷೆಯಲ್ಲಿ ಬರುವ ಕೊರೊನಾ ಜಾಗೃತಿಯ ಸಂದೇಶವನ್ನು ದೆಹಲಿ ಮೂಲದ ವಾಯ್ಸ್ ಒವರ್ ಕಲಾವಿದೆ, ಜಸ್ಲೀನ್ ಭಲ್ಲಾ ಎನ್ನುವ ಯುವತಿ ನೀಡಿದ್ದಾರೆ. ಈ ಮೊದಲು ಈಕೆ ವಿಮಾನ ಕಂಪನಿ ಹಾಗೂ ಟೆಲಿಕಾಂ ಸಂಸ್ಥೆಗೆ ಧ್ವನಿ ನೀಡಿದ್ದರು. ಆದರೆ ಈ ಎಲ್ಲಕ್ಕಿಂತ ಹೆಚ್ಚು ಫೇಮಸ್ ಆಗಿದ್ದು ಮಾತ್ರ ಕೊರೊನಾ ಕಾಲರ್ ಟೋನ್ನಿಂದ.
ಈ ಬಗ್ಗೆ ಮಾತನಾಡಿರುವ ಆಕೆ, ಈ ಕಾಲರ್ ಟೋನ್ಗೆ ಧ್ವನಿ ನೀಡಿದ ಬಳಿಕ ಇದು ಇಷ್ಟೊಂದು ವೈರಲ್ ಆಗುವುದು ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಕೊರೊನಾ ಹೆಸರಲ್ಲಿ ನನ್ನ ಧ್ವನಿ ಫೇಮಸ್ ಆಗುತ್ತಿರುವುದು ಕೊಂಚ ವಿಚಿತ್ರ ಎನಿಸಿದೆ ಎಂದಿದ್ದಾರೆ.