ನವದೆಹಲಿ: ಬಿಲಿಯರ್ಡ್ಸ್ ಎಂಬುದು ಶ್ರೀಮಂತರ ಆಟ. ಟೇಬಲ್ ಮೇಲೆ ಕೇರಂ ಸ್ವರೂಪದ ಮಣೆಯನ್ನಿಟ್ಟು ಬಾಲ್ ಗಳನ್ನು ಕೋಲಿನ ಮೂಲಕ ಹೊಡೆದು ಗುಂಡಿಗೆ ಕೆಡವುವ ಆಟ ಇದಾಗಿದೆ.
ಆದರೆ, ಇಲ್ಲಿ ಮಕ್ಕಳು ತಮ್ಮ ಕ್ರಿಯಾಶೀಲತೆಯ ಮೂಲಕ ನೆಲದ ಮೇಲೆಯೇ ಆಡುತ್ತಿದ್ದಾರೆ.
ನೆಲದ ಮೇಲೆ ಬಿಲಿಯರ್ಡ್ಸ್ ಮಣೆಯಾಕಾರದಲ್ಲಿ ಇಟ್ಟಿಗೆಗಳನ್ನು ಜೋಡಿಸಿ ಒಂದಷ್ಟು ಬಾಲ್ ಗಳನ್ನು ಇಟ್ಟುಕೊಂಡು ಕೋಲಿನ ಮೂಲಕ ಹೊಡೆದು ಮಕ್ಕಳು ಆಟವಾಡುತ್ತಿದ್ದಾರೆ. ಹಳೇ ವಿಡಿಯೋ ಇದಾಗಿದ್ದರೂ ಮತ್ತೆ ವೈರಲ್ ಆಗಿದೆ.
ಮಕ್ಕಳ ಅದ್ಭುತ ಬಿಲಿಯರ್ಡ್ಸ್ ಆಟದ 2018 ರ ಚೀನಾದ ಈ ವಿಡಿಯೋವನ್ನು ಲೆಫ್ಟಿನೆಂಟ್ ಜನರಲ್ ಗ್ಯಾನ್ ಭೂಷಣ ಅವರು “ನಿಜವಾದ ಕ್ರಿಯಾಶೀಲತೆ” ಎಂಬ ಕ್ಯಾಪ್ಷನ್ ನೊಂದಿಗೆ ಎರಡನೇ ಬಾರಿಗೆ ಟ್ವೀಟ್ ಮಾಡಿದ್ದಾರೆ.
43 ಸಾವಿರಕ್ಕೂ ಅಧಿಕ ಜನ ವಿಡಿಯೋ ವೀಕ್ಷಿಸಿದ್ದಾರೆ. “ಮಕ್ಕಳು ತಮ್ಮ ಖುಷಿ ಹುಡುಕಿಕೊಳ್ಳುವಲ್ಲಿ ಪ್ರವೀಣರು ಎಂದು” ಒಬ್ಬರು, “ಭವಿಷ್ಯದ ಚಾಂಪಿಯನ್ ಗಳು” ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಹೀಗೆ ನಾನಾ ಕಮೆಂಟ್ ಗಳು ವ್ಯಕ್ತವಾಗಿವೆ.
https://twitter.com/d_Tarund/status/1286722310271991808?ref_src=twsrc%5Etfw%7Ctwcamp%5Etweetembed%7Ctwterm%5E1286722310271991808%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fgame-changer-kid-builds-a-makeshift-billiards-table-with-bricks-viral-video-amazes-netizens%2F627296