ಮುಂಬೈ: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ.) ಟಿಡಿಎಸ್ ಸರ್ಟಿಫಿಕೇಶನ್ (ಫಾರ್ಮ್ ನಂ -16ಎ )ನ್ನು ನೋಂದಾಯಿತ ಇ ಮೇಲ್ ಐಡಿಗಳ ಮೂಲಕ ಗ್ರಾಹಕರಿಗೆ ಕಳಿಸುತ್ತಿದೆ. ಬ್ಯಾಂಕ್ ಶಾಖೆಗಳಿಂದಲೂ ಇದನ್ನು ಪಡೆಯಬಹುದಾಗಿದೆ.
ಈ ಕುರಿತಾಗಿ ಎಸ್.ಬಿ.ಐ. ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಲಾಗಿದ್ದು, 2019-20 ನೇ ಸಾಲಿನ ಟಿಡಿಎಸ್ ಕಡಿತ ಹಾಗೂ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂಬ ವಿವರಗಳನ್ನು ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಫಾರ್ಮ್ ನಂಬರ್ 26AS ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಪಡೆಯಬಹುದು ಎಂದು ಎಸ್.ಬಿ.ಐ. ತಿಳಿಸಿದೆ.
ಮಾಹಿತಿ ಬೇರ್ಪಟ್ಟು ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ಫಾರ್ಮ್ ನಂಬರ್ 26AS ನೀಡುತ್ತಿದೆ. ಅದರಲ್ಲಿ ವರ್ಷದಲ್ಲಿ ಮಾಡಿದ ಖರೀದಿ, ಜಮಾ, ರಿಯಲ್ ಎಸ್ಟೇಟ್ ವ್ಯವಹಾರ, ಕ್ರೆಡಿಟ್ ಕಾರ್ಡ್ ಪೇಮೆಂಟ್ ವಿವರ ಎಲ್ಲವೂ ಇರುತ್ತವೆ.
ಅಲ್ಲದೆ ಈ ವರ್ಷದಿಂದ ತೆರಿಗೆ ಪಾವತಿದಾರರಿಗೆ ನಿರ್ದಿಷ್ಟ ವ್ಯವಹಾರದ ಮಾಹಿತಿ ಒದಗಿಸಲು ಸ್ಟೇಟ್ಮೆಂಟ್ ಆಫ್ ಪೈನಾನ್ಶಿಯಲ್ ಟ್ರಾನ್ಸಾಕ್ಷನ್(SFTs) ಒದಗಿಸಲಾಗುತ್ತದೆ. ಇದರಲ್ಲಿ ಶೇರ್ ಗಳ ಖರೀದಿ ಮತ್ತು ಮಾರಾಟ ಮುಂತಾದ ಮಾಹಿತಿಗಳೂ ಇರುತ್ತವೆ. ಅಲ್ಲದೆ ಆಧಾರ್ ಸಂಖ್ಯೆ, ಹುಟ್ಟಿದ ದಿನಾಂಕ, ಇ ಮೇಲ್ ಐಡಿ ಮುಂತಾದ ವಿವರಗಳೂ ಇರಲಿವೆ ಎಂದು ವಿವರಿಸಲಾಗಿದೆ.