alex Certify ʼಲಾಕ್‌ ಡೌನ್ʼ‌ ವೇಳೆ ಸಿಕ್ಕ ಹುಡುಗನ ಆಸೆ ಈಡೇರಿಸಲು ಪೊಲೀಸ್‌ ಮಾಡುತ್ತಿದ್ದಾರೆ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್‌ ಡೌನ್ʼ‌ ವೇಳೆ ಸಿಕ್ಕ ಹುಡುಗನ ಆಸೆ ಈಡೇರಿಸಲು ಪೊಲೀಸ್‌ ಮಾಡುತ್ತಿದ್ದಾರೆ ಈ ಕೆಲಸ

ಲಾಕ್ ಡೌನ್ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕ ಹುಡುಗನೊಬ್ಬ ತಾನೂ ಆರಕ್ಷಕನಾಗುವ ಆಸೆಯೊಂದಿಗೆ ಪೊಲೀಸರಿಂದ ಪಾಠ ಕಲಿಯುತ್ತಿದ್ದಾನೆ.

ಇಂದೋರ್ ನ ಪ್ರದೇಶವೊಂದರಲ್ಲಿ ಗಸ್ತು ತಿರುಗುತ್ತಿದ್ದಾಗ ಈತ ಪೊಲೀಸರ ಕೈಗೆ ಸಿಕ್ಕಿದ್ದಾನೆ. ಲಾಕ್ ಡೌನ್ ಆಗಿದ್ದ ವೇಳೆ ಓಡಾಡುವಂತಿರಲಿಲ್ಲ. ಹೀಗಾಗಿ ಆತನಿಗೆ ಬುದ್ಧಿ ಹೇಳಿ, ಮನೆಗೆ ಬಿಡಬೇಕೆಂದುಕೊಂಡಾಗ ಆತ ಪೊಲೀಸ್ ಆಗಬೇಕೆನ್ನುವ ಆಸೆಯನ್ನು ಎಸ್ಎಚ್ಒ ವಿನೋದ್ ದೀಕ್ಷಿತ್ ಬಳಿ ವ್ಯಕ್ತಪಡಿಸಿದ್ದಾನೆ.

ಇದನ್ನು ಕೇಳಿ ಉತ್ಸಾಹಭರಿತರಾದ ದೀಕ್ಷಿತ್, ತಕ್ಷಣದಿಂದಲೇ ಆತನಿಗೆ ಪಾಠ ಮಾಡುವ ಭರವಸೆ ನೀಡಿದರು. ಅದಕ್ಕಾಗಿ ತಮ್ಮ ಕರ್ತವ್ಯ ಮುಗಿದ ಬಳಿಕ ತಾವೇ ಶಿಕ್ಷಕರಾಗಿ ಪಾಠ ಶುರು ಮಾಡಿದರು.

ಸಣ್ಣದೊಂದು ಉಪಾಹಾರ ಗೃಹ ನಡೆಸುವ ತಂದೆ, ಬೀದಿಬದಿ ವ್ಯಾಪಾರ ಮಾಡುವ ಅಜ್ಜ. ಬಡಕುಟುಂಬ. ಆಸೆಯೇನೋ ಬೆಟ್ಟದಷ್ಟಿದೆ. ಆದರೆ, ಬೇಕಾದ ತರಬೇತಿ ಪಡೆಯುವಷ್ಟು ಹಣಕಾಸಿನ ಅನುಕೂಲವಿಲ್ಲ. ಹೀಗಾಗಿ ಬಡತನದ ಕಾರಣಕ್ಕೆ ಪ್ರತಿಭೆ ಕಮರಬಾರದೆಂದು ನಿಶ್ಚಯಿಸಿದ ದೀಕ್ಷಿತ್, ತಮ್ಮ ದಿನದ ಡ್ಯೂಟಿ ಮುಗಿದ ನಂತರ ಅಲ್ಲೇ ಠಾಣೆಯ ಹೊರಗೆ ಬೀದಿಬದಿಯಲ್ಲೇ ಪಾಠ ಮಾಡುತ್ತಾರೆ. ಇಂಗ್ಲಿಷ್ ಹಾಗೂ ಗಣಿತ ಹೇಳಿಕೊಡುತ್ತಿದ್ದಾರೆ. ಈ ಬಗ್ಗೆ ಹುಡುಗನೂ ಸಂತಸಗೊಂಡಿದ್ದಾನೆ. ನೆಟ್ಟಿಗರೂ ಪೊಲೀಸರ ಈ ಕಾರ್ಯಕ್ಕೆ ಸೆಲ್ಯೂಟ್ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...