ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ಅಪಾರ ಪ್ರೀತಿ. ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬರುತ್ತದೆಂಬ ಕಾರಣಕ್ಕೆ ಚಿನ್ನ ಖರೀದಿಗೆ ಮುಂದಾಗುತ್ತಾರೆ. ಇದರ ಜೊತೆಗೆ ಸುರಕ್ಷಿತ ಎಂಬ ಕಾರಣಕ್ಕೆ ಹೂಡಿಕೆದಾರರೂ ಸಹ ಇದರ ಮೇಲೆಯೇ ಹೂಡಿಕೆ ಮಾಡುತ್ತಾರೆ.
ಆದರೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗಿದ್ದು, ಇದೀಗ 10 ಗ್ರಾಂ ಚಿನ್ನದ ಬೆಲೆ ದಾಖಲೆಯ 50 ಸಾವಿರ ರೂ. ದಾಟಿದೆ. ಇದು ಖರೀದಿದಾರರಿಗೆ ನಿರಾಸೆ ತಂದರೆ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಇದೀಗ ಮತ್ತೊಂದು ಆಘಾತಕಾರಿ ಸಂಗತಿ ತಿಳಿದುಬಂದಿದ್ದು, ಮುಂದಿನ 12 ತಿಂಗಳಿನಲ್ಲಿ 10 ಗ್ರಾಂ ಚಿನ್ನದ ಬೆಲೆ 65 ಸಾವಿರ ರೂಪಾಯಿ ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಗಾಡ್ಗೀಳ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೌರಭ್ ಗಾಡ್ಗೀಳ್ ಈ ವಿಷಯವನ್ನು ಹೇಳಿದ್ದಾರೆ.