ಧಾರವಾಡ: ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ವೃದ್ಧಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೊಳಿಸಿದ್ದು, ಅರ್ಹ ರೈತರು ಯೋಜನೆಯಡಿ ನೊಂದಾಯಿಸಿಕೊಂಡಿದ್ದಾರೆ.
ನೊಂದಾಯಿಸಿದ ರೈತರಲ್ಲಿ ಕೆಲವರು ನೋಂದಣಿ ನಂತರ ಆಧಾರ್ ತಿದ್ದುಪಡಿ ಮಾಡಿಸಿಕೊಂಡ ಪ್ರಯುಕ್ತ ಅಂತಹ ರೈತರ ಹಣ ಜಮೆಯಾಗದೆ ಕೇಂದ್ರ ಸರ್ಕಾರದ ಪೊರ್ಟಲ್ನಲ್ಲಿ (https://pmkisan.gov.in/beneficiarystatus.aspx) ಸ್ಥಿತಿ ಪರಿಶೀಲಿಸಿದಾಗ ಆಧಾರ್ ಸಂಖ್ಯೆ ಪರಿಶೀಲನೆ ಆಗಿರುವುದಿಲ್ಲವೆಂದು (Adhaar Not Verified) ವರದಿ ತೊರಿಸುತ್ತದೆ.
ಇಂತಹ ರೈತರು ಕೇಂದ್ರ ಸರ್ಕಾರದ ಸೂಚಿತ ವೆಬ್ಸೈಟ್ https://pmkisan.gov.in/UpdateAadharNoByFarmer.aspx ನಲ್ಲಿ ಸ್ವತಃ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪ್ರಸಕ್ತವಾಗಿ ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಅಪ್ಡೆಟ್ ಮಾಡಿದರೆ ಸಮಸ್ಯೆ ಪರಿಹಾರವಾಗಿ ನಂತರದ ದಿನಗಳಲ್ಲಿ ಹಣ ಜಮಾ ಆಗಲಿದೆ.
ನೊಂದಾಯಿತ ಕೆಲ ರೈತರ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗದ ಕಾರಣ ಸ್ಥಿತಿ ಪರಿಶೀಲಿಸಿದಾಗ ಆಧಾರ್ ನಾಟ್ ಸಿಡೆಡ್ ವಿತ್ ಎನ್,ಪಿ.ಸಿ.ಐ (Adhaar Not seeded with NPCI) ಎಂದು ತೋರಿಸಿದರೆ ಅಂತಹ ರೈತರು ತಾವು ಖಾತೆ ಹೊಂದಿರುವ ಒಂದು ಬ್ಯಾಂಕಿನಲ್ಲಿ ಆಧಾರ್ ಸಂಖ್ಯೆಯನ್ನು ಸಿಡಿಂಗ್ ಮಾಡಿಸಬೇಕು.
ನೊಂದಾಯಿತ ಕೆಲ ರೈತರ ಸ್ಥಿತಿ ಪರಿಶೀಲನೆಯನ್ನು ರಾಜ್ಯ ಸರ್ಕಾರದ ಪೋರ್ಟಲ್ನಲ್ಲಿ (http://fruitspmk.karnataka.gov.in/MISReport/CheckStatus.aspx) ಮಾಡಿದಾಗ ಭೂಮಿಯ ಜೊತೆ ಹೋಲಿಸಿದಾಗ ದೊರೆತ ಸಂಶಾಯಾತ್ಮಕ ಪ್ರಕರಣ ಎಂದು ತೋರಿಸಿದರೆ ರೈತರು ಹೊಸದಾಗಿ ಆರ್.ಟಿ.ಸಿ ಯಲ್ಲಿರುವ ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ವಿವರಗಳನ್ನು ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಹೇಳಲಾಗಿದೆ.