alex Certify ಗಡ್ಡಧಾರಿ ಪುರುಷರೇ ಹೆಚ್ಚು ಆಕರ್ಷಕವಂತೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಡ್ಡಧಾರಿ ಪುರುಷರೇ ಹೆಚ್ಚು ಆಕರ್ಷಕವಂತೆ…..!

Image result for women-find-men-with-beard-sexier-and-more-suitable-for relationshipಉದ್ದನೆಯ ಗಡ್ಡ ಬೆಳೆಸೋದು ಈಗ ಹೊಸ ಫ್ಯಾಷನ್. ಅಷ್ಟೇ ಅಲ್ಲ ಗಡ್ಡಧಾರಿ ಪುರುಷರನ್ನೇ ಮಹಿಳೆಯರು ಹೆಚ್ಚು ಇಷ್ಟಪಡ್ತಾರಂತೆ,

ಗಡ್ಡ ಇರುವ ಪುರುಷರೇ ಹೆಚ್ಚು ಸೆಕ್ಸಿಯಂತೆ. ಸಂಶೋಧನೆಯೊಂದರ ಪ್ರಕಾರ ಗಡ್ಡಧಾರಿಗಳೇ ದೀರ್ಘಕಾಲದ ಸಂಬಂಧಕ್ಕೆ ಬೆಸ್ಟ್ ಅನ್ನೋದು ಮಹಿಳೆಯರ ಅಭಿಪ್ರಾಯ.

ಆಕರ್ಷಣೆಯ ದರವನ್ನು ಗಮನಿಸಿದ್ರೆ ಗಡ್ಡಧಾರಿ ಮತ್ತು ಪುರುಷತ್ವದ ನಡುವೆ ಗಣನೀಯ ಸಂಬಂಧವಿದೆ ಎನ್ನುತ್ತಾರೆ ವಿಜ್ಞಾನಿಗಳು. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನೆಯಲ್ಲಿ ಒಬ್ಬನೇ ವ್ಯಕ್ತಿಯನ್ನು ಎರಡು ರೀತಿಯಲ್ಲಿ ಬಿಂಬಿಸಲಾಗಿತ್ತು. ಒಮ್ಮೆ ಸಂಪೂರ್ಣ ಗಡ್ಡಧಾರಿಯಾಗಿ ಮತ್ತೊಮ್ಮೆ ಪೂರ್ತಿ ಗಡ್ಡ ಬೋಳಿಸಿಕೊಂಡು. ಈ ಪೈಕಿ ಅಲ್ಪಕಾಲದ ಸಂಬಂಧಕ್ಕಿಂತಲೂ ಅಧಿಕ ರೇಟಿಂಗ್ ಪೂರ್ಣ ಗಡ್ಡಕ್ಕೆ ಸಿಕ್ಕಿದೆ. ಗಡ್ಡ ದೀರ್ಘಕಾಲದ ಸಂಬಂಧಕ್ಕೆ ಹೆಚ್ಚು ಆಕರ್ಷಕವೆನಿಸಿದೆ. ಗಡ್ಡವನ್ನು ಪೂರ್ತಿ ಬೋಳಿಸಿಕೊಂಡು, ಮಹಿಳೆಯರಂತೆ ನುಣ್ಣಗೆ ಕಾಣುವವರು ಕನಿಷ್ಠ ಆಕರ್ಷಣೀಯವೆನಿಸಿದ್ದಾರೆ, ಅವರಿಗೆ ಅತ್ಯಂತ ಕಡಿಮೆ ರೇಟಿಂಗ್ ಸಿಕ್ಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...