ಟಿ-20 ವಿಶ್ವಕಪ್ ಮುಂದೂಡಿಕೆಯಾದ್ಮೇಲೆ ಐಪಿಎಲ್ ದಾರಿ ಸುಗಮವಾಗಿದೆ. ಐಪಿಎಲ್‌ನ 13 ನೇ ಋತುವಿನ ಐಪಿಎಲ್ ಪಂದ್ಯಾವಳಿ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನವೆಂಬರ್ 8 ರವರೆಗೆ ನಡೆಯಲಿದೆ. ಬಿಸಿಸಿಐ ಐಪಿಎಲ್ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಇದನ್ನು ಫ್ರಾಂಚೈಸಿಗಳು ಮತ್ತು ಪ್ರಸಾರಕರಿಗೆ ತಿಳಿಸಲಾಗಿದೆ. ಎಲ್ಲರ ಕಣ್ಣುಗಳು ಈಗ ಐಪಿಎಲ್ ಮೇಲಿದೆ. ಐಪಿಎಲ್ ಬೌಂಡರಿ ಮತ್ತು ಸಿಕ್ಸರ್‌ಗಳ ಆಟವೆಂದು ಪರಿಗಣಿಸಲಾಗಿದೆ. ಆದ್ರೆ ಇಬ್ಬರು ಭಾರತೀಯ ಆಟಗಾರರು ಈವರೆಗೂ ಐಪಿಎಲ್‌ನಲ್ಲಿ ಒಂದೇ ಒಂದು ಬೌಂಡರಿ ಬಾರಿಸಿಲ್ಲ.
ಯಜುವೇಂದ್ರ ಚಾಹಲ್: ಭಾರತದ ಸ್ಟಾರ್ ಬೌಲರ್ ಯಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ ಎರಡು ತಂಡಗಳಿಗಾಗಿ ಆಡಿದ್ದಾರೆ. ಮುಂಬೈ ಇಂಡಿಯನ್ಸ್ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಯಜುವೇಂದ್ರ 2014 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಭಾಗವಾಗಿದ್ದಾರೆ. ಐಪಿಎಲ್‌ನಲ್ಲಿ ಚಾಹಲ್ 84 ಪಂದ್ಯಗಳಲ್ಲಿ 23.18 ಸರಾಸರಿಯಲ್ಲಿ 100 ವಿಕೆಟ್ ಪಡೆದಿದ್ದಾರೆ. ಅವರ ಬ್ಯಾಟಿಂಗ್ ಬಗ್ಗೆ ಮಾತನಾಡುವುದಾದ್ರೆ ಅವರು ಒಟ್ಟು 21 ರನ್ ಗಳಿಸಿದ್ದಾರೆ. ಚಾಹಲ್ ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಒಂದೇ ಒಂದು ಬೌಂಡರಿ ಬಾರಿಸಿಲ್ಲ.
ಪ್ರಜ್ಞಾನ್ ಓಜಾ: ಟೀಮ್ ಇಂಡಿಯಾದ ಮಾಜಿ ಎಡಗೈ ಸ್ಪಿನ್ನರ್, ಪ್ರಜ್ಞಾನ್ ಓಜಾ ಕೂಡ ಐಪಿಎಲ್‌ನಲ್ಲಿ ಒಂದು ಬೌಂಡರಿ ಬಾರಿಸಿಲ್ಲ. 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಪರ ಆಡಿದ್ದರು. 2010 ರಲ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಯೂ ಇದೆ. 92 ಪಂದ್ಯಗಳಲ್ಲಿ 26.20 ಸರಾಸರಿಯಲ್ಲಿ 89 ವಿಕೆಟ್ ಪಡೆದಿದ್ದಾರೆ. ಕೇವಲ 17 ರನ್ ಗಳಿಸಿರುವ ಅವರು ಬೌಂಡರಿ ಬಾರಿಸಿಲ್ಲ.