ನೃತ್ಯ ಹಾಗೂ ಸಂಗೀತ ಎಂತಹ ಬೇಸರದ ಸಮಯದಲ್ಲಿಯೂ ಆಹ್ಲಾದ ನೀಡುತ್ತವೆ. ಇದಕ್ಕೆ ಇದೀಗ ಕೋವಿಡ್ ಸೆಂಟರ್‌ನ ಈ ವಿಡಿಯೊ ತಾಜಾ ಉದಾಹರಣೆಯಾಗಿದೆ.
ಹೌದು, ದಿಬ್ರೂಘರ್‌ನಲ್ಲಿರುವ ಕೋವಿಡ್ ಸೋಂಕಿತರ ಕ್ವಾರಂಟೈನ್ ಕೇಂದ್ರದಲ್ಲಿ ಕೆಲ ಯುವಕರು ನೃತ್ಯ, ಸಂಗೀತದ ಮೂಲಕ ಮನಸ್ಸನ್ನು ಹಗುರವಾಗಿಸಿಕೊಳ್ಳುತ್ತಿರುವ ವಿಡಿಯೊ ವೈರಲ್ ಆಗಿದೆ.
ವ್ಯಕ್ತಿಯೊಬ್ಬರು ಕೇಂದ್ರಕ್ಕೆ ದಾಖಲಾಗುವಾಗ ಕೊಳಲನ್ನು ತಂದಿದ್ದು, ಅದನ್ನು ನುಡಿಸಲು ಆರಂಭಿಸಿದ್ದಾರೆ. ಇದಾಗುತ್ತಿದ್ದಂತೆ ಇನ್ನೊಬ್ಬ ಸೋಂಕಿತ ಈ ಸಂಗೀತಕ್ಕೆ ಬಿಹು ನೃತ್ಯ ಮಾಡಲು ಶುರು ಮಾಡಿದ್ದಾರೆ. ಈತನೊಂದಿಗೆ ಇನ್ನು ಕೆಲವರು ಸೇರಿ ಹೆಜ್ಜೆ ಹಾಕಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದೆ. ಎಎನ್ಐ ಹಾಕಿರುವ ಈ ವಿಡಿಯೊವನ್ನು 17 ಸಾವಿರ ಮಂದಿ ವೀಕ್ಷಿಸಿದ್ದು, ಸಾವಿರಾರು ಮಂದಿ ಲೈಕ್, ಕಾಮೆಂಟ್ ಮಾಡಿದ್ದಾರೆ.