alex Certify ಭಾರತದ ಈ ನಗರಗಳಲ್ಲಿ ನಡೆಯುತ್ತಿದೆ ಕೊರೊನಾ ಲಸಿಕೆ ಪ್ರಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಈ ನಗರಗಳಲ್ಲಿ ನಡೆಯುತ್ತಿದೆ ಕೊರೊನಾ ಲಸಿಕೆ ಪ್ರಯೋಗ

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ ಲಸಿಕೆ ಕುರಿತು ಪರೀಕ್ಷೆ ನಡೆಯುತ್ತಿದೆ. ಭಾರತದ ಬಯೋಟೆಕ್ ಜೈಡಸ್ ಕ್ಯಾಡಿಲಾ ಲಸಿಕೆಯ ಮಾನವ ಪ್ರಯೋಗಗಳನ್ನು ದೇಶದ 6 ನಗರಗಳಲ್ಲಿ ನಡೆಸಲಾಗುತ್ತಿದೆ. ಇತ್ತೀಚೆಗೆ  ದೆಹಲಿಯ 30 ವರ್ಷದ ಯುವಕನಿಗೆ ಏಮ್ಸ್ ನಲ್ಲಿ ಭಾರತ್ ಬಯೋಟೆಕ್ನ ಕೊವಾಕ್ಸೇನಿಗೆ 0.5 ಎಂಎಲ್ ಇಂಟ್ರಾಮಸ್ಕುಲರ್ ಇಂಜೆಕ್ಷನ್ ನೀಡಲಾಯಿತು. ಹಂತ 1 ಮತ್ತು 2 ನೇ ಹಂತದ ಕ್ಲಿನಿಕಲ್ ಪರೀಕ್ಷೆಗೆ ಬಿಬಿ ಮತ್ತು ಜೈಡಸ್ ಎರಡಕ್ಕೂ  ಅನುಮತಿ ನೀಡಲಾಗಿದೆ.

ಜುಲೈ 15 ರಂದು ಸ್ವಯಂಸೇವಕರಿಗೆ ಲಸಿಕೆಯ ಮೊದಲ ಪ್ರಮಾಣವನ್ನು ನೀಡಲಾಗಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಮೂರನೇ ಲಸಿಕೆಯನ್ನು ಶೀಘ್ರದಲ್ಲೇ ಭಾರತದಲ್ಲಿ ಪರೀಕ್ಷಿಸಲಾಗುವುದು. ಸಾಂಸ್ಥಿಕ ಅನುಮೋದನೆ ದೊರೆತ ಕೂಡಲೇ ಮಾನವ ಪ್ರಯೋಗಗಳನ್ನು ಪ್ರಾರಂಭಿಸುವುದಾಗಿ ಯುಕೆ ಯ ಅಸ್ಟ್ರಾ ಜೆನೆಕಾ ಜೊತೆ ಉತ್ಪಾದನಾ ಪಾಲುದಾರರಾದ ಸೀರಮ್ ಇನ್ಸ್ಟಿಟ್ಯೂಟ್ ಹೇಳಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ ಪರೀಕ್ಷೆ, ಏಮ್ಸ್, ದೆಹಲಿ ಮತ್ತು ಪಾಟ್ನಾ, ಪಿಜಿಐ ರೋಹ್ಟಕ್ ಸೇರಿದಂತೆ 12 ನಗರಗಳಲ್ಲಿ 12 ಆಸ್ಪತ್ರೆಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ 500 ಕ್ಕೂ ಹೆಚ್ಚು ಸ್ವಯಂಸೇವಕ ಮೇಲೆ ಪರೀಕ್ಷೆ ನಡೆಯಲಿದೆ.

ಸದ್ಯ ಬಯೋಟೆಕ್ ಮತ್ತು ಜೈಡಸ್ ಲಸಿಕೆ ಪ್ರಯೋಗ ಅಹಮದಾಬಾದ್ ಗೆ ಸೀಮಿತವಾಗಿದೆ. ಕೋವಾಕ್ಸಿನ್ ಪ್ರಯೋಗಗಳು  ಹೈದರಾಬಾದ್, ಪಾಟ್ನಾ, ಕಾಂಚಿಪುರಂ, ರೋಹ್ಟಕ್ ನಲ್ಲಿ ನಡೆಯುತ್ತಿದೆ. ನಾಗ್ಪುರ, ಭುವನೇಶ್ವರ, ಬೆಳಗಾವಿ, ಗೋರಖ್ಪುರ, ಕಾನ್ಪುರ್, ಗೋವಾ ಮತ್ತು ವಿಶಾಖಪಟ್ಟಣಂಗೆ ವಿಸ್ತರಣೆಯಾಗಲಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...