ವಾರಣಾಸಿ: ರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ಭೂಮಿ ಪೂಜೆಗೆ ಸಮಯ ನಿಗದಿಯಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆಗಸ್ಟ್ 5 ರಂದು ಒಳ್ಳೆಯ ಮುಹೂರ್ತವಿಲ್ಲ. ಇಡೀ ತಿಂಗಳಲ್ಲಿ ಯಾವುದೇ ಒಳ್ಳೆಯ ಮುಹೂರ್ತವಿಲ್ಲದ ಕಾರಣ ದಿನಾಂಕ ಬದಲಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಕಾಶಿ ಸಾಧು, ಸ್ವಾಮೀಜಿಗಳು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್ ನ ಸದಸ್ಯರು ತಮ್ಮ ಅನುಕೂಲಕ್ಕೆ ತಕ್ಕಂತೆ ದಿನಾಂಕ ನಿಗದಿ ಮಾಡಿದ್ದಾರೆ. ಇಡೀ ತಿಂಗಳಲ್ಲಿ ಒಳ್ಳೆಯ ಮುಹೂರ್ತವಿಲ್ಲವೆಂದು ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಸುಮೇರು ಪೀಠ ಶಂಕರಾಚಾರ್ಯ ನರೇಂದ್ರ ಮಹಾರಾಜ್ ಹೇಳಿದ್ದಾರೆ.
ಒಳ್ಳೆಯ ಮುಹೂರ್ತದಲ್ಲಿ ಭೂಮಿಪೂಜೆ ನೆರವೇರಿಸದಿದ್ದರೆ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.