ಸಹೋದರ – ಸಹೋದರಿ ನಡುವೆ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನ. ಈ ದಿನದಂದು ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟಿದರೆ, ನಿನ್ನ ರಕ್ಷಣೆಗೆ ಸದಾಕಾಲ ನಾನಿರುತ್ತೇನೆ ಎಂಬ ಸಂದೇಶ ಸಹೋದರನಿಂದ ರವಾನೆಯಾಗುತ್ತದೆ.
ಈ ಬಾರಿ ರಾಖಿ ಹಬ್ಬ ಆಗಸ್ಟ್ 3ರಂದು ನಡೆಯಲಿದ್ದು, ಕೊರೊನಾ ಸಂಕಷ್ಟದ ನಡುವೆ ನಡೆಯುತ್ತಿರುವ ಈ ಹಬ್ಬ ಮತ್ತೊಂದು ಕಾರಣಕ್ಕೆ ವಿಶೇಷವಾಗಿ ಗಮನ ಸೆಳೆದಿದೆ.
ಈವರೆಗೆ ಚೀನಾದ ರಾಖಿಗಳು ಭಾರತದಲ್ಲಿ ಅತ್ಯಧಿಕವಾಗಿ ಮಾರಾಟವಾಗುತ್ತಿದ್ದು, ಆದರೆ ಗಡಿಯಲ್ಲಿ ಚೀನಾ ತೋರಿದ ಕುತಂತ್ರಿ ಬುದ್ಧಿಯ ಕಾರಣಕ್ಕೆ ಭಾರತೀಯರು ಚೀನಾ ರಾಖಿಗಳಿಗೆ ಗುಡ್ ಬೈ ಹೇಳುತ್ತಿದ್ದಾರೆ.
ಈ ಬಾರಿ ಭಾರತದಲ್ಲಿ ತಯಾರಾದ ರಾಖಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಅದರಲ್ಲೂ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದಿಂದ ತಯಾರಿಸಲಾಗಿರುವ ಮೋದಿ ರಾಖಿಗೆ ಫುಲ್ ಡಿಮ್ಯಾಂಡ್ ಇದೆ.
ತಾಮ್ರ, ಬೆಳ್ಳಿಯ ರಾಖಿಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಅಂಟಿಸಲಾಗಿದ್ದು, ಈ ರಾಖಿಗೆ ಹಲವು ರಾಜ್ಯಗಳಿಂದ ಭಾರಿ ಬೇಡಿಕೆ ಬರುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.