ಚೆನ್ನೈ: ಕೇಂದ್ರ ಸರ್ಕಾರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಎಲ್ಲ ಬೈಕ್ ಗಲ್ಲಿಯೂ ಸ್ಯಾರಿ ಗಾರ್ಡ್ ಮತ್ತು ರಕ್ಷಣಾತ್ಮಕ ಸಾಧನಗಳನ್ನು ಹೊಂದಬೇಕೆಂದು ತಿಳಿಸಲಾಗಿದೆ.
ಹ್ಯಾಂಡ್ ಹೋಲ್ಡ್ ಮತ್ತು ಪುಟ್ ರೆಸ್ಟ್ ಗಳನ್ನು ಹೊಂದಿರುವುದು ಕಡ್ಡಾಯವೆಂದು ತಿಳಿಸಿದೆ. ಸುರಕ್ಷತಾ ಸಾಧನ ವೈಶಿಷ್ಟ್ಯಗಳನ್ನು ಹೊಂದಿಲ್ಲದ ದ್ವಿಚಕ್ರವಾಹನಗಳ ವಿನ್ಯಾಸಗಳನ್ನು ಬದಲಿಸುವ ಅಗತ್ಯವಿದೆಯೆಂದು ಕೈಗಾರಿಕಾ ಮೂಲಗಳು ಹೇಳಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೇಂದ್ರ ಮೋಟಾರು ವಾಹನಗಳ ನಿಯಮಗಳಿಗೆ ತಿದ್ದುಪಡಿ ತಂದಿದ್ದು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಹೈ ಅಂಡ್ ಬೈಕ್ ಗಳಲ್ಲಿ ಸವಾರಿ ಮಾಡುವ ಯುವಕರು ಇನ್ನು ಮುಂದೆ ತಮ್ಮ ಹಿಂಬದಿ ಸವಾರರಿಗೆ ಏಕೈಕ ಹ್ಯಾಂಡ್ ಹೋಲ್ಡ್ ಗಳಾಗಿ ಕಾರ್ಯನಿರ್ವಹಿಸಲು ಅವಕಾಶ ಇರುವುದಿಲ್ಲ. ದ್ವಿಚಕ್ರ ವಾಹನಗಳ ತಯಾರಕರು ಮೋಟರ್ ಸೈಕಲ್ ಚಾಲಕನ ಆಸನದ ಹಿಂದಿನ ಸವಾರನಿಗೂ ಸುರಕ್ಷತಾ ಸಾಧನ ವ್ಯವಸ್ಥೆ ಮಾಡಬೇಕು. ಹಿಂಬದಿ ಚಕ್ರ ಅರ್ಧದಷ್ಟು ಭಾಗವನ್ನು ರಕ್ಷಿಸುವ ಸಾಧನಗಳನ್ನು ಒದಗಿಸಬೇಕು. ಹಿಂದೆ ಕುಳಿತ ಸವಾರನ ಬಟ್ಟೆಗಳು ಅದರಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ತಡೆಯಬೇಕು ಎಂದು ಸೂಚಿಸಲಾಗಿದೆ.
ಸಾರಿಗೆ ಇಲಾಖೆ ನೋಂದಣಿಯಾಗುವ ಬೈಕ್ ಗಳಲ್ಲಿ ಎಲ್ಲ ಸುರಕ್ಷತೆ ಗಮನಿಸಬೇಕು. ಸುಪ್ರೀಂಕೋರ್ಟ್ ದ್ವಿಚಕ್ರ ವಾಹನಗಳಲ್ಲಿ ಸುರಕ್ಷಿತ ನಿಬಂಧನೆಗಳನ್ನು 2018ರಲ್ಲಿ ಕಡ್ಡಾಯಗೊಳಿಸಿರುವುದರ ಆಧಾರದ ಮೇಲೆ ಹೊಸ ನಿಯಮ ರೂಪಿಸಲಾಗಿದೆ ಎನ್ನಲಾಗಿದೆ.