ಮೆಲ್ಬೋರ್ನ್: ಕಳೆದು ಹೋದ ಬೆಕ್ಕೊಂದು 10 ವರ್ಷದ ನಂತರ ಸಿಕ್ಕ ಅಪರೂಪದ ವಿದ್ಯಮಾನವೊದು ಆಸ್ಟ್ರೇಲಿಯಾದಲ್ಲಿ ನಡೆದಿದೆ. ಜಾರ್ಜಿಯಾ ಟ್ಸಾಟ್ಸಾರಿಸ್ ಅವರ ಮಿಶಾಕ್ ಎಂಬ ಹೆಸರಿನ ಬೆಕ್ಕು 2010 ರಲ್ಲಿ ಕಾಣೆಯಾಗಿತ್ತು.
ಹುಡುಕಲು ಸಾಕಷ್ಟು ಪ್ರಯತ್ನ ಮಾಡಿದರೂ ಬೆಕ್ಕು ಮಾತ್ರ ಸಿಕ್ಕಿರಲಿಲ್ಲ. ಕ್ಯಾಡ್ಸ್ ಟೊನ್ ಮನೆಯಿಂದ ಅವರು ಹೊರಗೆ ಹೋಗುವಾಗ ಆವರಣದ ಬೋನ್ ನಲ್ಲಿ ಬೆಕ್ಕನ್ನು ಬಿಟ್ಟು ಹೋಗಿದ್ದರು. ವಾಪಸ್ ಬಂದು ನೋಡುವಾಗ ಬೆಕ್ಕು ನಾಪತ್ತೆಯಾಗಿತ್ತು.
ಕಳೆದ ಶುಕ್ರವಾರ ಪೆನಿಸುವೆಲಾ ವೆಟ್ ರೆಫರಲ್ ಆಸ್ಪತ್ರೆಯಿಂದ ನಿಮ್ಮ ಬೆಕ್ಕು ಪತ್ತೆಯಾಗಿದೆ ಎಂದು ಕರೆ ಬಂದಿತ್ತು.
ಬೆಕ್ಕು ಬಂದರು ಕಾಮಗಾರಿ ಪ್ರದೇಶದ ನಡುವೆ ಸಿಕ್ಕಿಕೊಂಡಿತ್ತು ಎನ್ನಲಾಗಿದೆ. ಬೆಕ್ಕು ಅನಾರೋಗ್ಯಕ್ಕೊಳಗಾಗಿದ್ದು ಅದಕ್ಕೆ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ಅದಕ್ಕಾಗಿ ಜಾರ್ಜಿಯಾ ಸಾರ್ವಜನಿಕರಿಂದ ದೇಣಿಗೆ ಪಡೆದು ಬೆಕ್ಕಿಗೆ ಚಿಕಿತ್ಸೆ ಕೊಡಿಸಿದ್ದಾರೆ. “ನಾನು ಮಿಶಾಕ್ ಳನ್ನು ನೋಡಿದಾಗ ಅದರ ಕಣ್ಣು ಗುರುತಿಸಿದೆ. ಆನಂದದಿಂದ ಕುಸಿದು ಬಿದ್ದೆʼʼ ಎಂದು ಜಾರ್ಜಿಯಾ ಹೇಳಿಕೊಂಡಿದ್ದಾರೆ.