ನವದೆಹಲಿ: ಕೋವಿಡ್-19 ಆರೈಕೆ ಕೇಂದ್ರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೊರೊನಾ ಸೋಂಕು ತಗುಲಿದ 14 ವರ್ಷದ ಹುಡುಗಿ ಮೇಲೆ ಕೊರೊನಾ ಸೋಂಕಿತ ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ದೆಹಲಿಯ ಛತ್ತರ್ ಪುರದ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರದಲ್ಲಿ ಲಕ್ಷಣ ರಹಿತ ಸೋಂಕಿತರನ್ನು ಇರಿಸಲಾಗಿದೆ. ಆರೈಕೆ ಕೇಂದ್ರದ ಸಮೀಪದ ನಿವಾಸಿಗಳಾಗಿರುವ ಸಂತ್ರಸ್ತೆ ಮತ್ತು ಆರೋಪಿ ಕೊರೊನಾ ಸೋಂಕು ತಗುಲಿದ್ದರಿಂದ ಸಂಬಂಧಿಕರೊಂದಿಗೆ ಆರೈಕೆ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ.
ವಾಶ್ ರೂಮ್ ನಲ್ಲಿ ಬಾಲಕಿ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದನ್ನು ಮತ್ತೊಬ್ಬ ಬಾಲಕಿ ಚಿತ್ರೀಕರಣ ಮಾಡಿಕೊಂಡಿದ್ದಾಳೆ. ಘಟನೆಯ ನಂತರ ಸಂತ್ರಸ್ತೆ ಸಂಬಂಧಿಕರಿಗೆ ಮಾಹಿತಿ ನೀಡಿದ್ದು ಅವರು ಆರೈಕೆ ಕೇಂದ್ರದ ಉಸ್ತುವಾರಿಗಳಾದ ಐಟಿಬಿಪಿ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಲಾಗಿದೆ ಆರೋಪಿ ಮತ್ತು ಆತನಿಗೆ ನೆರವಾದ ಬಾಲಕಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.