alex Certify BIG NEWS: GST ವಂಚನೆ ತಡೆಗೆ ಮತ್ತೊಂದು ಮಹತ್ವದ ಕ್ರಮ ಕೈಗೊಂಡ ಕೇಂದ್ರ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: GST ವಂಚನೆ ತಡೆಗೆ ಮತ್ತೊಂದು ಮಹತ್ವದ ಕ್ರಮ ಕೈಗೊಂಡ ಕೇಂದ್ರ ಸರ್ಕಾರ

ನವದೆಹಲಿ: ನಕಲಿ ಇನ್ವಾಯ್ಸ್ ಸೃಷ್ಟಿ ಮಾಡುವ ಮೂಲಕ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ವಂಚಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮಕೈಗೊಂಡಿದ್ದು, ಹೊಸ ಯೋಜನೆ ರೂಪಿಸಿದೆ.

ಅಕ್ಟೋಬರ್ 1 ರಿಂದ ಇ -ಇನ್ವಾಯ್ಸ್ ಯೋಜನೆ ಜಾರಿಗೆ ಬರಲಿದ್ದು, ಆರಂಭಿಕ ಹಂತದಲ್ಲಿ ವಾರ್ಷಿಕ ವಹಿವಾಟು 500 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ವಹಿವಾಟು ಇರುವ ಉದ್ದಿಮೆಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತವೆ ಎನ್ನಲಾಗಿದೆ.

ಸಿಬಿಐಸಿ ಪ್ರಧಾನ ಆಯುಕ್ತ ಯೋಗೇಂದ್ರ ಗರ್ಗ್ ಈ ಕುರಿತು ಮಾತನಾಡಿ, ಅಕ್ಟೋಬರ್ 1 ರಿಂದ ಇ – ಇನ್ವಾಯ್ಸ್ ಯೋಜನೆ ಜಾರಿಗೆ ಬರಲಿದೆ. ನಕಲಿ ಇನ್ವಾಯ್ಸ್ ಸೃಷ್ಟಿಸಿ ಜಿಎಸ್ಟಿ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...