ಕೆಲಸದ ನಡುವೆ ಕೆಲವೊಮ್ಮೆ ಒತ್ತಡ ನಿವಾರಣೆಗೆ ವಿವಿಧ ರೀತಿಯ ಸ್ಟ್ರೆಸ್ ಬರ್ಸ್ಟ್ ಮಾಡುತ್ತಾರೆ. ಇದೀಗ ಇಂಡಿಗೋ ಸಿಬ್ಬಂದಿಯೂ ಇದೇ ರೀತಿಯ ವಿಡಿಯೊ ಮಾಡಿದ್ದು, ವೈರಲ್ ಆಗಿದೆ.
ಹೌದು, ಕೆಲ ದಿನಗಳ ಹಿಂದೆ ವಿಶಾಖಪಟ್ಟಣದ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಗ್ರೌಂಡ್ ಆಫೀಸರ್ ಸಿಬ್ಬಂದಿಗಳು ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವಿಡಿಯೊದಲ್ಲಿ ಸಿಬ್ಬಂದಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಡ್ಯಾನ್ಸ್ ಮಾಡಿದ್ದಾರೆ.
ಇದೀಗ ಈ ವಿಡಿಯೊ ವೈರಲ್ ಆಗಿದ್ದು, ಅನೇಕರು ರಿಟ್ವೀಟ್ ಮಾಡಿದ್ದಾರೆ. ಸಿಬ್ಬಂದಿಗಳು ಹಾಕಿರುವ ಹೆಜ್ಜೆಗೆ ಸ್ವತಃ ಇಂಡಿಗೋ ಸಂಸ್ಥೆ ಶಹಬಾಸ್‌ಗಿರಿ ನೀಡಿದೆ.
https://twitter.com/ujjwaldha/status/1285250365693149192?ref_src=twsrc%5Etfw%7Ctwcamp%5Etweetembed%7Ctwterm%5E1285250365693149192%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Findigo-staff-grooving-to-allu-arjuns-track-at-airport-goes-viral-actor-humbled-by-the-gesture-2728105.html