ಸಾಮಾನ್ಯವಾಗಿ ನಮ್ಮ ಪಿಎಫ್ ಖಾತೆ ಇದ್ದರೆ ಅದರಲ್ಲಿ ಎಷ್ಟು ಹಣ ಇದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹಾಗಾದ್ರೆ ನಿಮ್ಮ ಖಾತೆಯ ಹಣದ ಬಗ್ಗೆ ತಿಳಿಯಲು ಸರಳ ವಿಧಾನ ಇಲ್ಲಿದೆ. ಒಂದೇ ಒಂದು ಮಿಸ್ಡ್ ಕಾಲ್ ಕೊಡೋ ಮೂಲಕ ತಿಳಿಯಬಹುದಾಗಿದೆ.
ಹೌದು, ನಿಮ್ಮ ಪಿಎಫ್ ಬ್ಯಾಲೆನ್ಸ್ ಬಗ್ಗೆ ತಿಳಿಯಬೇಕು ಎಂದರೆ, 011-22901406 ನಂಬರ್ ಗೆ ಪಿಎಫ್ ಖಾತೆಗೆ ನೀಡಿದ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ಕೊಟ್ಟರೆ ನಿಮ್ಮ ಬ್ಯಾಲೆನ್ಸ್ ಬಗ್ಗೆ ಮಾಹಿತಿ ನೀಡುತ್ತದೆ.
ಮಿಸ್ ಕಾಲ್ ನೀಡಿದ ನಂತರ AM-EPFOHO ನಿಂದ ಬ್ಯಾಲೆನ್ಸ್ ಬಗ್ಗೆ ಮೆಸೇಜ್ ಬರುತ್ತದೆ. ಇದರಲ್ಲಿ ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ಸಂದೇಶದ ಮೂಲಕ ತಿಳಿಯುತ್ತದೆ. ಈ ಸಂದೇಶವು ನಿಮ್ಮ ಖಾತೆಯ ಬಗ್ಗೆ ಎಲ್ಲಾ ಮಾಹಿತಿಯು ಈ ಮೆಸೇಜ್ ನಲ್ಲಿ ಇರುತ್ತದೆ. ಈ ಮೆಸೇಜ್ ನಲ್ಲಿ ನಿಮ್ಮ ಐಡಿ ನಂಬರ್, ಪಿಎಫ್ ಸಂಖ್ಯೆ, ಹೆಸರು, ಹುಟ್ಟಿದ ದಿನಾಂಕ, ಇಪಿಎಫ್ ಬ್ಯಾಲೆನ್ಸ್ ಎಲ್ಲವನ್ನು ತಿಳಿಸಲಾಗುತ್ತದೆ.