ಸಾಮಾನ್ಯವಾಗಿ ಮನುಷ್ಯರು ಯಂಗ್ ಅಂಡ್ ಎನರ್ಜೆಟಿಕ್ ಆಗಿಯೇ ಉಳಿಯಬೇಕು, ಸುಂದರವಾಗಿ ಕಾಣಬೇಕು, ಮುಪ್ಪು ನಮ್ಮ ಬಳಿ ಸುಳಿಯುವುದೇ ಬೇಡ ಎಂಬ ಆಲೋಚನೆಯಲ್ಲಿ ಇದ್ದೇ ಇರುತ್ತಾರೆ. ಆದರೆ ಪ್ರಾಕೃತಿಕವಾಗಿ ಒಬ್ಬ ಮನುಷ್ಯ ಮುಪ್ಪಿನಾವಸ್ಥೆಗೆ ಬರಲೇಬೇಕು. ಇದೀಗ ಮುಪ್ಪಾಗುವಿಕೆಯಿಂದ ಪಾರಾಗಲು ದಾರಿಯೊಂದನ್ನು ಕಂಡು ಹಿಡಿದಿದೆ ಕ್ಯಾಲಿಫೋರ್ನಿಯಾ ವಿವಿ.
ಹೌದು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್‌ಡಿಯಾಗೊಯ ವಿಜ್ಞಾನಿಗಳು ಅಧ್ಯಯನವೊಂದನ್ನು ಮಾಡಿದ್ದಾರೆ. ಈ ಅಧ್ಯಯನದ ಪ್ರಕಾರ, ಒಂದೇ ಪರಿಸರದಲ್ಲಿ ಬೆಳೆಯುವ ಬಹುತೇಕ ಒಂದೇ ರೀತಿಯ ಅನುವಂಶಿಕ ವಸ್ತುಗಳ ಜೀವಕೋಶಗಳು ವಿಭಿನ್ನ ರೀತಿಯಲ್ಲಿ ಮುಪ್ಪಾಗುತ್ತವೆ ಎಂದು ತಿಳಿಸಿದ್ದಾರೆ.
ಹಾಗೆಯೇ ಮುಪ್ಪನ್ನು ತಡೆಯುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಧ್ಯಯನದ ಹಿರಿಯ ಲೇಖಕ ನ್ಯಾನ್ ಹಾವೊ ಸಿಎನ್‌ಎನ್, ಇದರ ಬಗ್ಗೆ ಅಧ್ಯಯನ ನಡೆಸುವುದರ ಜೊತೆಗೆ ಏಜಿಂಗ್ ರೂಟ್‌ನ ಮಾಲಿಕ್ಯುಲರ್ ಪ್ರೋಸೆಸ್ ಹಾಗೂ ಅವುಗಳ ನಡುವಿನ ಸಂಪರ್ಕಗಳು ಹಾಗೂ ವಯಸ್ಸಾದ ಕೋಶಗಳನ್ನು ನಿಯಂತ್ರಿಸುವ ಮಾಲಿಕ್ಯೂಲರ್ ಸರ್ಕಿಟ್‌ಗಳನ್ನೂ ಕಂಡುಕೊಂಡಿದ್ದೇವೆ. ಏಜಿಂಗ್ ಲ್ಯಾಂಡ್ ಸ್ಕೇಪ್ ನ್ನು ಅನುಷ್ಠಾನಗೊಳಿಸುವ ಮೂಲಕ ವಯಸ್ಸಾದ ಪ್ರಕ್ರಿಯೆಯನ್ನು ವಿಳಂಬ ಮಾಡಬಹುದು. ಜೊತೆಗೆ ಜೀವಕೋಶಗಳ ಜೀವಿತಾವಧಿ ಹೆಚ್ಚಿಸಿದರೆ ಅನನ್ಯ ಏಜಿಂಗ್ ರೂಟ್ ಅನ್ನು ರಚಿಸಲು ಸಾಧ್ಯವಾಗುತ್ತದೆ. ಈ ಮೂಲಕ ವಯಸ್ಸಾಗುವಿಕೆಯ ಪ್ರಕ್ರಿಯೆನ್ನು ವಿಳಂಬಗೊಳಿಸಬಹುದಾಗಿದೆ ಎನ್ನಲಾಗಿದೆ.