ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ಅಪಾರ ವ್ಯಾಮೋಹ. ಹೀಗಾಗಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಚಿನ್ನದ ಖರೀದಿ ಭರಾಟೆ ಜೋರಾಗಿಯೇ ಇರುತ್ತದೆ. ಆದರೆ ಈಗ ಕೊರೊನಾ ವಕ್ಕರಿಸಿರುವ ಪರಿಣಾಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಚಿನ್ನ ಕೊಳ್ಳಲು ಹಿಂದೆಮುಂದೆ ನೋಡುವಂತಾಗಿದೆ.
ಇದರ ಜೊತೆಗೆ ಮುಗಿಲು ಮುಟ್ಟಿರುವ ಬೆಲೆಯೂ ಕೂಡಾ ಚಿನ್ನ ಖರೀದಿಯಿಂದ ಮಾರು ದೂರ ಹೋಗುವಂತಾಗಿದೆ. ಹೌದು ಭಾರತದಲ್ಲಿ ಈಗ ಚಿನ್ನದ ಬೆಲೆ ಬರೋಬ್ಬರಿ ಅರ್ಧ ಲಕ್ಷ ರೂಪಾಯಿ ದಾಟಿದೆ. ಅಂದರೆ ಪ್ರತಿ 10 ಗ್ರಾಂ ಚಿನ್ನದ ಬೆಲೆ ಈಗ 51,570 ರೂಪಾಯಿಯಾಗಿದೆ.
ಬೆಳ್ಳಿಯ ಬೆಲೆಯಲ್ಲೂ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದು, ಕೆ.ಜಿ. ಬೆಳ್ಳಿ ಬೆಲೆ 60550 ರೂಪಾಯಿಗಳಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ – ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಮುಂದಿನ ಇನ್ನೂ ಕೆಲ ದಿನಗಳ ಕಾಲ ಇದು ಮುಂದುವರೆಯಲಿದೆ ಎನ್ನಲಾಗಿದೆ.