ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಉತ್ತಮ ಪ್ರದರ್ಶನ ತೋರುತ್ತಿದ್ದು, ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಭಾರತ ತಂಡ ಗೆಲುವಿನ ಹಾದಿಯಲ್ಲಿ ಮುನ್ನುಗ್ಗುತ್ತ ಸಾಗಬೇಕೆಂದರೆ ಬೆನ್ ಸ್ಟೋಕ್ಸ್ ರಂತ ಆಲ್ ರೌಂಡರ್ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
ಬೆನ್ ಸ್ಟೋಕ್ಸ್ ರಂತಹ ಪಂದ್ಯವನ್ನು ಗೆಲ್ಲುವ ಸವ್ಯಸಾಚಿಯನ್ನು ಹೊಂದಿದ್ದರೆ, ಭಾರತೀಯ ಕ್ರಿಕೆಟ್ ವಿಶ್ವದ ಎಲ್ಲೆಡೆಯೂ ಅಜೇಯವಾಗಿರುತ್ತದೆ ಎಂದು ಇರ್ಫಾನ್ ಪಠಾಣ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.