ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಕಾನೂನು ಪದವಿಯ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿರುವ ಯುವತಿಯೊಬ್ಬರು ಉನ್ನತ ವ್ಯಾಸಂಗಕ್ಕೆ ಪ್ರತಿಷ್ಠಿತ ಬ್ರಿಟನ್ ನ ಆಕ್ಸ್ಫರ್ಡ್ ವಿವಿಗೆ ಆಯ್ಕೆಯಾಗಿದ್ದಾರೆ.
ಇದರಲ್ಲೇನು ವಿಶೇಷತೆ ಎಂದಿರಾ? ಗಾಲಿ ಕುರ್ಚಿಯಲ್ಲಿದ್ದುಕೊಂಡೇ ಆಕ್ಸ್ಫರ್ಡ್ ವಿವಿಗೆ ತೆರಳುತ್ತಿರುವ ಮೊದಲ ಭಾರತೀಯೆ ಎಂಬ ಶ್ರೇಯ ಪ್ರತಿಷ್ಟಾ ದೇವೇಶ್ವರ್ ಎಂಬ ಹೆಸರಿನ ಈಕೆಯದ್ದು. ಪ್ರತಿಷ್ಟಾ ಯಾವಾಗಲೂ ಓದಿನಲ್ಲಿ ಮುಂದಿದ್ದು, ತಮ್ಮ ಶೈಕ್ಷಣಿಕ ಜೀವನದುದ್ದಕ್ಕೂ ಅಗ್ರ ಶ್ರೇಯಾಂಕಗಳನ್ನೇ ಪಡೆಯುತ್ತಾ ಬಂದಿದ್ದಾರೆ.
“ಸಾರ್ವಜನಿಕ ನೀತಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಲು ಆಕ್ಸ್ಫರ್ಡ್ ವಿವಿಗೆ ಆಯ್ಕೆಯಾಗಿರುವುದನ್ನು ತಿಳಿಸಲು ಥ್ರಿಲ್ ಆಗುತ್ತಿದೆ. ICUನಲ್ಲಿ ನನ್ನ ಜೀವ ಉಳಿಸಿಕೊಳ್ಳಲು ಮಾಡುತ್ತಿದ್ದ ಹೋರಾಟದಿಂದ ಆಕ್ಸ್ಫರ್ಡ್ ವಿವಿಗೆ ಪ್ರವೇಶಿಸುವವರೆಗೂ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇವೆ” ಎಂದು ಪ್ರತಿಷ್ಟಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.