ಎಲ್ಲವೂ ಸರಿಯಿದ್ದರೂ ಜಿಮ್ನಾಸ್ಟಿಕ್ಸ್ ಕಲೆ ಕರಗತ ಮಾಡಿಕೊಳ್ಳಲು ಹರಸಾಹಸಪಡುತ್ತಾರೆ. ಆದರೆ ಹುಟ್ಟಿನಿಂದಲೇ ಎರಡೂ ಕಾಲುಗಳು ಇಲ್ಲದ ಬಾಲಕಿ ಇದೀಗ ಜಿಮ್ನಾಸ್ಟಿಕ್ಸ್ ಅನ್ನು ಕರಗತ ಮಾಡಿಕೊಂಡಿದ್ದಾಳೆ.
ಹೌದು, ಅಮೆರಿಕದ ಓಹಿಹೋ ಪ್ರದೇಶದ ಎಂಟು ವರ್ಷದ ಬಾಲಕಿ ಪೇಜ್ ಕ್ಯಾಲಂಡೈನ್ ಇದೀಗ ಜಿಮ್ನಾಸ್ಟಿಕ್ಸ್ ಕಲೆಯನ್ನು ಕರಗತ ಮಾಡಿಕೊಳ್ಳಲು ಶ್ರಮಿಸುತ್ತಿದ್ದಾಳೆ. ಹುಟ್ಟಿನಿಂದ ಅಂಗಾಂಗ ಊನವಿದ್ದರೂ ಅದನ್ನು ಲೆಕ್ಕಿಸದೇ ಜಿಮ್ನಾಸ್ಟಿಕ್ಸ್ ಕಲೆ ಕಲಿಯಲು ಆರಂಭಿಸಿ, ಇದೀಗ ಹಲವು ಪಟ್ಟುಗಳನ್ನು ಕಲಿತಿದ್ದಾಳೆ.
18 ತಿಂಗಳು ಇದ್ದಾಗಲೇ ಜಿಮ್ನಾಸ್ಟಿಕ್ಸ್‌ಗೆ ಬಾಲಕಿ ಸೇರಿದ್ದಾಳೆ. ಆಕೆ ಗಟ್ಟಿಯಾಗಬೇಕು ಎನ್ನುವ ಉದ್ದೇಶದಿಂದ ಜಿಮ್ನಾಸ್ಟಿಕ್ಸ್‌ಗೆ ಸೇರಿಸಲಾಯಿತು. ಅಂದಿನಿಂದ ಇಲ್ಲಿಯವರೆಗೆ ಅತ್ಯುತ್ತಮವಾಗಿ ಕಲಿತಿದ್ದಾಳೆ ಎಂದು ಆಕೆಯ ತಂದೆ ಸೀನ್ ಕ್ಯಾಲೈಂಡನ್ ಹೇಳಿದ್ದಾರೆ. ಝನ್ಸೆವೆಲ್ಲಿ ಜಿಮ್ನಾಸ್ಟಿಕ್ಸ್ ಎನ್ನುವ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದು, ಇದೀಗ ಈ ವಿಡಿಯೊ ವೈರಲ್ ಆಗಿವೆ.