ಬಿಗ್‌ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ ಖಿನ್ನತೆಗೆ ಮತ್ತು ಈ ಜಗತ್ತಿಗೆ ಗುಡ್ ಬೈ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಕೆಲ ಕಾಲ ಆತಂಕ ಸೃಷ್ಟಿಸಿದ್ದರು. ಇವರ ಈ ಪೋಸ್ಟ್ ನೋಡಿದ್ದ ಅಭಿಮಾನಿಗಳು ಸಿನಿಮಾ ಮಂದಿ ಒಂದು ಕ್ಷಣ ಶಾಕ್ ಆಗಿದ್ದಂತೂ ಸತ್ಯ.
ಇನ್ನು ಜಯಶ್ರೀ ಟ್ವೀಟ್ ಕಂಡು ಆತಂಕಕ್ಕೆ ಒಳಗಾದ ಸ್ನೇಹಿತರು ಕೂಡಲೇ ಜಯಶ್ರೀ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ. ಇನ್ನು ನಟಿ ಜಯಶ್ರೀ ಕಳೆದ ಕೆಲವು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದರಂತೆ. ಖಿನ್ನತೆಗೆ ಒಳಗಾಗಿರುವ ಅವರನ್ನು ರಿಹ್ಯಾಬಿಲಿಟೇಷನ್ ಕೇಂದ್ರಕ್ಕೆ ಸೇರಿಸಲಾಗಿದ್ದು, ಅಲ್ಲಿಂದಲೇ ಅವರು ಈ ರೀತಿ ಪೋಸ್ಟ್ ಮಾಡಿದ್ದಾರೆ ಎಂಬುದು ಮೂಲಗಳ ಮಾಹಿತಿ ಇದೆ.
ಇಷ್ಟೆಲ್ಲಾ ಘಟನೆ ನಂತರ ಮತ್ತೊಂದು ಪೋಸ್ಟ್ ಮಾಡಿರುವ ಈ ನಟಿ ನಾನು ಆರಾಮಾಗಿದ್ದೇನೆ. ಸೇಫಾಗಿದ್ದೇನೆ ಲವ್ ಯು ಆಲ್ ಎಂದು ಪೋಸ್ಟ್ ಮಾಡಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದಾಗಿಯೇ ಖಿನ್ನತೆಗೆ ಈ ನಟಿ ಒಳಗಾಗಿದ್ದಾರೆ ಎನ್ನಲಾಗಿದೆ.